ಬಂಟ್ವಾಳ, ಜೂನ್ 26, 2023 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳನ್ನು ಆನ್ ಲೈನ್ ಅರ್ಜಿ ಸಲ್ಲಿಸಲು ಜನರಿಗೆ ನೆರವಾಗುವಂತೆ ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಇಂದಿರಾ ಸೇವಾ ಕೇಂದ್ರ ಹೆಸರಿನಲ್ಲಿ ಉಚಿತ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.
ತಾಲೂಕಿನ ಕಳ್ಳಿಗೆ, ಬೊಳ್ಳಾಯಿ, ನಂದಾವರ, ಸಜಿಪಮುನ್ನೂರು ಗ್ರಾಮದ ಗುರುಮಂದಿರ ಹಾಗೂ ಸುಭಾಶ ನಗರ (ಬೇಂಕ್ಯ) ದಲ್ಲಿ ಈ ಸೇವಾ ಕೇಂದ್ರಗಳನ್ನು ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
0 comments:
Post a Comment