ಸಾಮೂಹಿಕ ಅತ್ಯಾಚಾರಿಗಳ, ಗೂಂಡಾಗಿರಿ ನಡೆಸುವವರ ಬಗ್ಗೆ ಬಿಜೆಪಿಗರ ನಿಲುವು ಸ್ಪಷ್ಟಪಡಿಸಿ : ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ - Karavali Times ಸಾಮೂಹಿಕ ಅತ್ಯಾಚಾರಿಗಳ, ಗೂಂಡಾಗಿರಿ ನಡೆಸುವವರ ಬಗ್ಗೆ ಬಿಜೆಪಿಗರ ನಿಲುವು ಸ್ಪಷ್ಟಪಡಿಸಿ : ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ - Karavali Times

728x90

2 August 2023

ಸಾಮೂಹಿಕ ಅತ್ಯಾಚಾರಿಗಳ, ಗೂಂಡಾಗಿರಿ ನಡೆಸುವವರ ಬಗ್ಗೆ ಬಿಜೆಪಿಗರ ನಿಲುವು ಸ್ಪಷ್ಟಪಡಿಸಿ : ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ

ಡ್ರಗ್ಸ್ ಮಾಫಿಯಾ ವಿರುದ್ದ ಬಂಟ್ವಾಳದಲ್ಲಿ ಶೀಘ್ರ ಮಾಧ್ಯಮ ಮಿತ್ರರ ಜೊತೆಗೂಡಿ ಬೃಹತ್ ಅಭಿಯಾನ 

ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲದಲ್ಲಿ ದಲಿತ ಬಾಲಕಿಯ ಸರಣಿ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿದವರ, ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆ ನೈತಿಕ ಗೂಂಡಾಗಿರಿ ನಡೆಸಿದವರ, ಮಂಗಳೂರಿನಲ್ಲಿ ಮಾಧ್ಯಮ ಮಿತ್ರನ ಮೇಲೆ ಗೂಂಡಾಗಿರಿ ಮೆರೆದವರ ಬಗ್ಗೆ ಬಿಜೆಪಿ ನಾಯಕರು ಯಾಕಾಗಿ ಮಾತನಾಡುತ್ತಿಲ್ಲ. ಅವರ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ತಮ್ಮ ಅಭಿಪ್ರಾಯವನ್ನು ಏಕೆ ವ್ಯಕ್ತಪಡಿಸುತ್ತಿಲ್ಲ. ಮಾತೆತ್ತಿದರೆ ಮಾತೆ, ದೇಶಪ್ರೇಮ, ರಾಷ್ಟç ಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿಗರು ಈ ಎಲ್ಲಾ ಕೃತ್ಕಗಳನ್ನು ಎಸಗಿದ ಆರೋಪಿಗಳನ್ನು ಬೆಂಬಲಿಸುತ್ತಿರುವುದು ಏಕೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ವಾಗ್ದಾಳಿ ನಡೆಸಿದರು. 


ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದೊಮ್ಮೆ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಉದ್ದೇಶಪೂರ್ವಕವಾಗಿ ವೀಡಿಯೋ ಚಿತ್ರೀಕರಣ ನಡೆಸಿ ವೈರಲ್ ಮಾಡಿದ ಘಟನೆ ನಡೆಯಿತು. ಈ ಎಲ್ಲ ಘಟನೆಗಳ ಹಿಂದೆಯೂ ಬ್ಲಾö್ಯಕ್ ಮೇಲ್ ತಂತ್ರಗಾರಿಕೆ ಇದೆ. ಹೆಣ್ಣು ಮಕ್ಕಳನ್ನು ಆಶ್ಲೀಲವಾಗಿ ಅನೈತಿಕವಾಗಿ ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ನೀಚ ಕೃತ್ಯ ಎಸಗುವವರ ವಿರುದ್ದ ಎಂದಿಗೂ ಬಿಜೆಪಿಗರು ತುಟಿ ಬಿಚ್ಚಿಲ್ಲ. ಅದೇ ಜಾಗದಲ್ಲಿ ಭಿನ್ನ ಧರ್ಮೀಯರಿಂದ ಕೃತ್ಯ ನಡೆದರೆ ಮಾತ್ರ ಮಾತಾ ಪ್ರೇಮ, ದೇಶಪ್ರೇಮ ಉಕ್ಕಿ ಬರುತ್ತಿರುವುದರ ಹಿಂದೆ ಚುನಾವಣಾ ರಾಜಕೀಯ ಅಲ್ಲದೆ ಇನ್ನೇನು ಇಲ್ಲ ಎಂದವರು ಕಿಡಿ ಕಾರಿದರು. 

ಸಮಾಜದಲ್ಲಿ ಸಂಘಟನೆಗಳ ಹೆಸರಿನಲ್ಲಿ, ಸಮಾಜ ಸೇವಕ-ಸುಧಾಕರ ಹೆಸರಿನಲ್ಲಿ ನೀಚ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಯಾಗುವಂತೆ ಸಂಬAಧಪಟ್ಟ ಇಲಾಖಾಧಿಕಾರಿಗಳು ಮೈಚಳಿ ಬಿಟ್ಟು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ ರೈ ಇಂತಹ ಕೃತ್ಯಗಳನ್ನು ಬಂಟ್ವಾಳ ಕಾಂಗ್ರೆಸ್ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ ಎಂದರು. 

ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ಮಾಫಿಯಾ ವಿರುದ್ದವೂ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಧ್ಯಮ ಮಿತ್ರರನ್ನು ಸೇರಿಸಿಕೊಂಡು ಬೃಹತ್ ಅಭಿಯಾನವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದ ರಮಾನಾಥ ರೈ ಸಮಾಜದಲ್ಲಿ ನಡೆಯುತ್ತಿರುವ ಸಮಾಜದ್ರೋಹಿ ಕೃತ್ಯಗಳಿಗೆ ಡ್ರಗ್ಸ್ ವ್ಯಸನ ಕೂಡಾ ಹಲವು ಬಾರಿ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳು ಹಾಗೂ ವ್ಯಸನಿಗಳ ವಿರುದ್ದವೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರೈ ಆಗ್ರಹಿಸಿದರು.

ಈ ಸಂದರ್ಭ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಶರೀಫ್, ಅಬೂಬಕ್ಕರ್ ಸಿದ್ದೀಕ್, ಬಾಲಕೃಷ್ಣ ಆಳ್ವ ಮೊದಲಾದವರು ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸಾಮೂಹಿಕ ಅತ್ಯಾಚಾರಿಗಳ, ಗೂಂಡಾಗಿರಿ ನಡೆಸುವವರ ಬಗ್ಗೆ ಬಿಜೆಪಿಗರ ನಿಲುವು ಸ್ಪಷ್ಟಪಡಿಸಿ : ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ Rating: 5 Reviewed By: karavali Times
Scroll to Top