ಬೆಳ್ತಂಗಡಿ, ಜನವರಿ 29, 2024 (ಕರಾವಳಿ ಟೈಮ್ಸ್) : ತಾಲೂಕಿನ ವೇಣೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಎಂಬಲ್ಲಿ, ಪರವಾಣಿಗೆ ಹೊಂದಿ ಪಟಾಕಿ ತಯಾರಿಸುತ್ತಿದ್ದ ಸೈಯ್ಯದ್ ಬಶೀರ್ ಎಂಬವರ ಪಟಾಕಿ ತಯಾರಕಾ ಘಟಕದಲ್ಲಿ ಭಾನುವಾರ ಸಂಜೆ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿದೆ.
ಅವಘಡದಲ್ಲಿ ಪಟಾಕಿ ತಯಾರಕಾ ಘಟಕದಲ್ಲಿದ್ದ 3 ಜನ ಕಾರ್ಮಿಕರು ಮೃತಪಟ್ಟಿರುವ ಸಾಧ್ಯತೆಯಿದೆ. ಉಳಿದಂತೆ ಯಾರಿಗೂ ಹಾನಿಯಾಗಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.















0 comments:
Post a Comment