ಪುತ್ತೂರು, ಜನವರಿ 29, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ಮೀರಿ ಮಗುಚಿ ಬಿದ್ದ ಪರಿಣಾಮ ವೃದ್ದ ವ್ಯಕ್ತಿಯೋರ್ವರು ಮೃತಪಟ್ಟು ತಾಯಿ-ಮಗು ಗಾಯಗೊಂಡ ಘಟನೆ ಆರ್ಯಾಪು ಗ್ರಾಮದ ಬಳಕ್ಕ ಸೇತುವೆ ಬಳಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಬ್ದುಲ್ ರಹಿಮಾನ್ (60) ಎಂದು ಹೆಸರಿಸಲಾಗಿದ್ದು, ಗಾಯಾಳು ಮಹಳೆಯನ್ನು ಅವರ ಸೊಸೆ ಆಯಿಷತುಲ್ ತಾಯಿರಾ (33) ಹಾಗೂ ಅವರ ಮಗ ಅಬ್ದುಲ್ ರಶಾದ್ ಎಂದು ಹೆಸರಿಸಲಾಗಿದೆ.
ಆಯಿಷತ್ತುಲ್ ತಾಯಿರಾ ಅವರು ಶನಿವಾರ ರಾತ್ರಿ ತನ್ನ ಮಾವ ಅಬ್ದುಲ್ ರೆಹೆಮಾನ್ ಮತ್ತು ಪುತ್ರ ಅಬ್ದುಲ್ ರಶಾದ್ ಅವರೊಂದಿಗೆ, ನೆರೆಯ ನಿವಾಸಿ ಉಮ್ಮರ್ ಫಾರೂಕ್ ಅವರ ಆಟೋ ರಿಕ್ಷಾದಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಳಕ್ಕ ಸೇತುವೆ ಬಳಿ ಪ್ರಯಾಣಿಸುತ್ತಿದ್ದಾಗ, ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮಗುಚಿ ಬಿದ್ದಿದೆ. ಪರಿಣಾಮ ರಿಕ್ಷಾದ ಹಿಂದಿನ ಸೀಟಿನಲ್ಲಿ ಎಡಬದಿಯಲ್ಲಿ ಕುಳಿತಿದ್ದ ಮಾವ ಅಬ್ದುಲ್ ರೆಹೆಮಾನ್ ಅವರು ರಿಕ್ಷಾದಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತಾಯಿರಾ ಹಾಗೂ ಪುತ್ರ ರಶಾದ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment