ಆಲಡ್ಕ-ಬೋಗೋಡಿ ಸಂಪರ್ಕದ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಮಾಜಿ ಸಚಿವರು - Karavali Times ಆಲಡ್ಕ-ಬೋಗೋಡಿ ಸಂಪರ್ಕದ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಮಾಜಿ ಸಚಿವರು - Karavali Times

728x90

19 February 2024

ಆಲಡ್ಕ-ಬೋಗೋಡಿ ಸಂಪರ್ಕದ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಮಾಜಿ ಸಚಿವರು

ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ 24ನೇ ವಾರ್ಡ್ ಪಾಣೆಮಂಗಳೂರು ಸಮೀಪದ ಆಲಡ್ಕ-ಬೋಗೋಡಿ ಸಂಪರ್ಕಿಸುವ ಒಳರಸ್ತೆಗೆ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ಅನುದಾನದಿಂದ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಭಾನುವಾರ ಉದ್ಘಾಟಿಸಿದರು. 

ಈ ಸಂದರ್ಭ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಇರ್ಶಾದ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪುತ್ತುಮೋನು, ಪ್ರಮುಖರಾದ ಜಿ ಎ ಅಮಾನುಲ್ಲಾ ಗುಡ್ಡೆಅಂಗಡಿ, ಇಬ್ರಾಹಿಂ ಬೋಗೋಡಿ, ಮುಹಮ್ಮದ್ ಅನ್ಸಾರ್ ಫಾರೆಸ್ಟ್, ಇಕ್ಬಾಲ್ ಬೋಗೋಡಿ, ಅಬ್ದುಲ್ ಲತೀಫ್ ಬೋಗೋಡಿ, ಮಜೀದ್ ಬೋಗೋಡಿ, ಅಬ್ಬಾಸ್ ಬೋಗೋಡಿ, ಉಮರಬ್ಬ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ-ಬೋಗೋಡಿ ಸಂಪರ್ಕದ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಮಾಜಿ ಸಚಿವರು Rating: 5 Reviewed By: karavali Times
Scroll to Top