ವಿಟ್ಲಪಡ್ನೂರು : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸಾವಿರಾರು ಮೌಲ್ಯದ ಅಡಿಕೆ ಕಳವು - Karavali Times ವಿಟ್ಲಪಡ್ನೂರು : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸಾವಿರಾರು ಮೌಲ್ಯದ ಅಡಿಕೆ ಕಳವು - Karavali Times

728x90

31 March 2024

ವಿಟ್ಲಪಡ್ನೂರು : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸಾವಿರಾರು ಮೌಲ್ಯದ ಅಡಿಕೆ ಕಳವು

ಬಂಟ್ವಾಳ, ಮಾರ್ಚ್ 31, 2024 (ಕರಾವಳಿ ಟೈಮ್ಸ್) : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ಕಳವುಗೈದ ಘಟನೆ ವಿಟ್ಲಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಇಲ್ಲಿನ ನಿವಾಸಿ ಪೂವಪ್ಪಗೌಡ (60) ಅವರು ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸುಮಾರು 75 ಸಾವಿರ ರೂಪಾಯಿ ಮೌಲ್ಯದ 10 ಗೋಣಿ ಚೀಲದಷ್ಟು ಅಡಿಕೆಯನ್ನು ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲಪಡ್ನೂರು : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಸಾವಿರಾರು ಮೌಲ್ಯದ ಅಡಿಕೆ ಕಳವು Rating: 5 Reviewed By: karavali Times
Scroll to Top