ಉಜಿರೆ : ಬೇಕರಿ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಉಜಿರೆ : ಬೇಕರಿ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

1 March 2024

ಉಜಿರೆ : ಬೇಕರಿ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

 ಬೆಳ್ತಂಗಡಿ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ತಾಲೂಕಿನ ಉಜಿರೆ ಗ್ರಾಮದ ದಿಶಾ ಬೇಕರಿ ಮುಂಭಾಗ ನಿಲ್ಲಿಸಿದ್ದ ಬೈಕ್ ಕಾಣೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಜಿರೆ ನಿವಾಸಿ ರಾಜು (32) ಎಂಬವರು ಗುರುವಾರ (ಫೆ 29) ರಾತ್ರಿ ತನ್ನ  ಕೆಎ-19 ಎಚ್‌ ಪಿ-0606 ನೋಂದಣಿ ಸಂಖ್ಯೆಯ  ಹೊಂಡಾ ಯೂನಿಕಾರ್ನ್‌ ದ್ವಿಚಕ್ರ ವಾಹನವನ್ನು ಉಜಿರೆ ದಿಶಾ ಬೇಕರಿ ಮುಂಭಾಗ ನಿಲ್ಲಿಸಿ ತೆರಳಿದ್ದರು.

ಒಂದು ತಾಸು ಬಿಟ್ಟು ಬಂದು ನೋಡಿದಾಗ ನಿಲ್ಲಿಸಿ ತೆರಳಿದ್ದ ಬೈಕ್ ಕಾಣೆಯಾಗಿದೆ. ಕಳವಾಗಿರುವ ಬೈಕಿನ ಅಂದಾಜು ಮೌಲ್ಯ  75 ಸಾವಿರ ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಉಜಿರೆ : ಬೇಕರಿ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: lk
Scroll to Top