ಬಂಟ್ವಾಳ, ಎಪ್ರಿಲ್ 26, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 32 ವರ್ಷಗಳ ಇತಿಹಾಸವೇ ಮರುಕಳಿಸಲಿದೆ. ಯಾವುದೇ ಬದಲಾವಣೆ ಇಲ್ಲ. ಬಿಜೆಪಿ ಅಭ್ಯರ್ಥಿ ಗೆದ್ದಾಗಿದೆ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹೇಳಿದ್ದಾರೆ.
ಚುನಾವಣಾ ದಿನ ಶುಕ್ರವಾರ ಪಾಣೆಮಂಗಳೂರು ಸರಕಾರಿ ಶಾಲಾ ಬೂತ್ ಬಳಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಪತ್ರಿಕೆ ಜೊತೆ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಜಯಗಳಿಸೋದು ಶತಸ್ಸಿದ್ದ ಎಂದರು.
0 comments:
Post a Comment