ಉಕ್ಕುಡ : ಬೈಕುಗಳ ನಡುವೆ ಅಪಘಾತದಿಂದ ಇಬ್ಬರು ಸವಾರರಿಗೆ ಗಾಯ - Karavali Times ಉಕ್ಕುಡ : ಬೈಕುಗಳ ನಡುವೆ ಅಪಘಾತದಿಂದ ಇಬ್ಬರು ಸವಾರರಿಗೆ ಗಾಯ - Karavali Times

728x90

4 April 2024

ಉಕ್ಕುಡ : ಬೈಕುಗಳ ನಡುವೆ ಅಪಘಾತದಿಂದ ಇಬ್ಬರು ಸವಾರರಿಗೆ ಗಾಯ

ಬಂಟ್ವಾಳ, ಎಪ್ರಿಲ್ 04, 2024 (ಕರಾವಳಿ ಟೈಮ್ಸ್) : ಬೈಕುಗಳ ನಡುವೆ ಅಪಘಾತ ನಡೆದು ಇಬ್ಬರು ಸವಾರರು ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಉಕ್ಕುಡ ಎಂಬಲ್ಲಿ ಸಂಭವಿಸಿದೆ. 

ಮೋಹನ್ ಕುಮಾರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಉಕ್ಕುಡ ಎಂಬಲ್ಲಿ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಮೋಹನ್ ಕುಮಾರ್ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರೆ, ಇನ್ನೊಂದು ಬೈಕ್ ಸವಾರ ಕೂಡಾ ಗಾಯಗೊಂಡಿದ್ದಾರೆ. ಈ ಬಗ್ಗೆ ಗಾಯಾಳು ಮೋಹನ್ ಕುಮಾರ್ ಅವರ ಸಹೋದ ರಂಜಿತ್ ಕುಮಾರ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಉಕ್ಕುಡ : ಬೈಕುಗಳ ನಡುವೆ ಅಪಘಾತದಿಂದ ಇಬ್ಬರು ಸವಾರರಿಗೆ ಗಾಯ Rating: 5 Reviewed By: karavali Times
Scroll to Top