ಕುಕ್ಕಿಪ್ಪಾಡಿ : ಅಟೋ ರಿಕ್ಷಾ-ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆಗೆ - Karavali Times ಕುಕ್ಕಿಪ್ಪಾಡಿ : ಅಟೋ ರಿಕ್ಷಾ-ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆಗೆ - Karavali Times

728x90

4 April 2024

ಕುಕ್ಕಿಪ್ಪಾಡಿ : ಅಟೋ ರಿಕ್ಷಾ-ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆಗೆ

ಬಂಟ್ವಾಳ, ಎಪ್ರಿಲ್ 04, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಹಾಗೂ ಆಕ್ಟಿವಾ ಸ್ಕೂಟರ್ ಡಿಕ್ಕಿ ಹೊಡೆದ ಇಬ್ಬರು ಚಾಲಕರು ಗಾಯಗೊಂಡ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಕರೆಂಕಿಲ ಎಂಬಲ್ಲಿ ಸಂಭವಿಸಿದೆ. 

ಅಪಘಾತದಿಂದ ಅಟೋ ರಿಕ್ಷಾ ಚಾಲಕ ಬೇಬಿ ಗೌಡ ಹಾಗೂ ಸ್ಕೂಟರ್ ಚಾಲಕ ಗಾಯಗೊಂಡಿದ್ದಾರೆ. ಸಿದ್ದಕಟ್ಟೆ ಕಡೆಯಿಂದ ಬಂದ ಅಟೋ ರಿಕ್ಷಾ ಕರೆಂಕಿಲ ತಿರುವು ರಸ್ತೆಯಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸ್ಕೂಟರ್ ಸವಾರ ರಸ್ತೆಗೆಸೆಯಲ್ಪಟ್ಟರೆ ಅಟೋ ರಿಕ್ಷಾ ಕೂಡಾ ಮಗುಚಿ ಬಿದ್ದಿದೆ. ಅಟೋ ರಿಕ್ಷಾದಲ್ಲಿದ್ದ ಇತರ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಾಮದಪದವು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕುಕ್ಕಿಪ್ಪಾಡಿ : ಅಟೋ ರಿಕ್ಷಾ-ಆಕ್ಟಿವಾ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top