ಚುನಾವಣಾ ಹೊಸ್ತಿಲಲ್ಲಿ ಫೇಕ್ ಸುದ್ದಿಗಳ ಮೇಲಾಟ : ಮುಖ್ಯಮಂತ್ರಿಯನ್ನೇ ಯಾಮಾರಿಸಿದ ಕಿಡಿಗೇಡಿಗಳು, 7 ಮಂದಿಯ ವಿರುದ್ದ ಎಫ್.ಐ.ಆರ್. - Karavali Times ಚುನಾವಣಾ ಹೊಸ್ತಿಲಲ್ಲಿ ಫೇಕ್ ಸುದ್ದಿಗಳ ಮೇಲಾಟ : ಮುಖ್ಯಮಂತ್ರಿಯನ್ನೇ ಯಾಮಾರಿಸಿದ ಕಿಡಿಗೇಡಿಗಳು, 7 ಮಂದಿಯ ವಿರುದ್ದ ಎಫ್.ಐ.ಆರ್. - Karavali Times

728x90

10 April 2024

ಚುನಾವಣಾ ಹೊಸ್ತಿಲಲ್ಲಿ ಫೇಕ್ ಸುದ್ದಿಗಳ ಮೇಲಾಟ : ಮುಖ್ಯಮಂತ್ರಿಯನ್ನೇ ಯಾಮಾರಿಸಿದ ಕಿಡಿಗೇಡಿಗಳು, 7 ಮಂದಿಯ ವಿರುದ್ದ ಎಫ್.ಐ.ಆರ್.

ಬೆಂಗಳೂರು, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ನೇರವಾಗಿ ಎದುರಾಳಿಯನ್ನು ಎದುರಿಸುವ ಧೈರ್ಯ ತೋರದೆ ವಾಮ ಮಾರ್ಗದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿರುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದವೇ ಫೇಕ್ ಸುದ್ದಿ ಸೃಷ್ಟಿಸಿ ಪತ್ರಿಕೆಯ ತುಣುಕಿನಂತೆ ಸಾಮಾಜಿಕ ಜಾಲತಾಣದಲ್ಲಿ ಹರಡಿ ಗೊಂದಲ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ಸಿಎಂ ಅವರ ದೂರಿನ ಮೇರೆಗೆ 7 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. 

“ನಮಗೆ ಹಿಂದೂಗಳ ವೋಟ್ ಬೇಡ, ಮುಸ್ಲಿಂ ವೋಟ್ ಸಾಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿಯ ಪತ್ರಿಕಾ ತುಣುಕು ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಹಿಂದೂಗಳ ಅಗತ್ಯ ನಮಗೆ ಇಲ್ಲ. ಮುಸ್ಲಿಮರ ವೋಟ್ ಸಾಕು” ಎಂದು ಮುಖ್ಯಮಂತ್ರಿಗಳು ಹೇಳಿರುವುದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ ಪೆÇೀಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ಕಾನೂನು ಘಟನೆ ಸೈಬರ್ ಕ್ರೈಂ ಠಾಣೆಗೆ ಕ ದೂರು ನೀಡಿತ್ತು. ಕಾಂಗ್ರೆಸ್ ದೂರಿನ ಆಧಾರದ ಮೇಲೆ ಸದ್ಯ ಪ್ರಭಾಕರ್, ವಸಂತ ಗಿಳಿಯಾರ್ ಸೇರಿದಂತೆ ಒಟ್ಟು 7 ಜನರು ವಿರುದ್ದ ಎಫ್‍ಐಆರ್ ದಾಖಲಾಗಿದೆ.

ಇನ್ನು ಈ ಬಗ್ಗೆ ಎಕ್ಸ್ ನಲ್ಲಿ ಪೆÇೀಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ.

ಫೇಕ್ ನ್ಯೂಸ್‍ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಅಂತಹ ಕಾನೂನು ಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅತ್ಯಂಕ್ಕೆ ಕೊಂಡೊಯ್ಯುತ್ತೇವೆ ಎಂದು ಸಿಎಂ ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಚುನಾವಣಾ ಹೊಸ್ತಿಲಲ್ಲಿ ಫೇಕ್ ಸುದ್ದಿಗಳ ಮೇಲಾಟ : ಮುಖ್ಯಮಂತ್ರಿಯನ್ನೇ ಯಾಮಾರಿಸಿದ ಕಿಡಿಗೇಡಿಗಳು, 7 ಮಂದಿಯ ವಿರುದ್ದ ಎಫ್.ಐ.ಆರ್. Rating: 5 Reviewed By: karavali Times
Scroll to Top