ಬಂಟ್ವಾಳ, ಸೆಪ್ಟೆಂಬರ್ 26, 2024 (ಕರಾವಳಿ ಟೈಮ್ಸ್) : ಅಲ್ಲಿಪಾದೆ ಸಂತ ಅಂತೋನಿಯವರ ದೇವಾಲಯ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ಆಯೋಗ್ಯ, ಅರೋಗ್ಯ, ಯುವ ಆಯೋಗ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮ ಅಲ್ಲಿಪಾದೆ ಸೌಹಾರ್ದ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ವಂದನೀಯ ಫಾದರ್ ರೋಬರ್ಟ್ ಡಿ’ಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ ಜ್ಞಾನೇಶ್ವರಿ ಜಯರಾಮ್, ಡಾ ಸೋನಿಯಾ ಕೆ ಎಲ್ ಸಿಕ್ವೆರಾ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ರಂಜನ್ ಎ ವಿ,, ಕ್ಲುನಿ ಕಾನ್ವೆಂಟಿನ ಸಿಸ್ಟರ್ ನಸಿಸ, ನವೀನ್ ಮೊರಸ್, ಕಿರಣ್ ನೊರೊನ್ಹಾ, ಜೋನ್ ವಾಲ್ಟರ್ ಮೊದಲಾದವರು ಭಾಗವಹಿಸಿದ್ದರು.
ಅಲ್ಲಿಪಾದೆ ಸ್ತ್ರೀ ಸಂಘದ ಅಧ್ಯಕ್ಷೆ ಶ್ರೀಮತಿ ಲವೀನಾ ಮೋರಸ್ ಸ್ವಾಗತಿಸಿ, ರೆನ್ನಿ ಫೆರ್ನಾಂಡಿಸ್ ವಂದಿಸಿದರು. ಕುಮಾರಿ ವೆನೆಸ್ಸಾ ಮೊರಸ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment