ಬಂಟ್ವಾಳ, ಅಕ್ಟೋಬರ್ 02, 2024 (ಕರಾವಳಿ ಟೈಮ್ಸ್) : ತಾಮ್ರ, ಹಿತ್ತಾಳೆ, ಕಂಚು, ಬೆಳ್ಳಿ ಗ್ಲಾಸ್, ಪಾತ್ರೆ, ಬಿಂದಿಗೆ, ಹಂಡೆ ಮೊದಲಾದ ಬೆಲೆ ಬಾಳುವ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವುಗೈದ ಘಟನೆ ಕರೋಪಾಡಿ ಗ್ರಾಮದ ಬೇತ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೋಪಾಡಿ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿ ಕುಟುಂಬ ಸಮೇತ ವಾಸವಾಗಿರುವ ಡಾ ಬಿ ಕೃಷ್ಣರಾಜ್ ಅವರ ಪಿತ್ರಾರ್ಜಿತ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿ ಮತ್ತು ಮನೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಬೇತ ಎಂಬಲ್ಲಿ ಇದ್ದು, ಸಂಕಪ್ಪ ಶೆಟ್ಟಿ ಎಂಬವರು ನೋಡಿಕೊಂಡಿರುತ್ತಾರೆ. ಸೆ 25 ರಿಂದ 19ರ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಕಳ್ಳತನವಾದ ಬಗ್ಗೆ ಸಂಕಪ್ಪ ಶೆಟ್ಟಿ ಅವರು ಸೆ 30 ರಂದು ದೂರವಾಣಿ ಕರೆ ಮಾಡಿ ತಿಳಿಸಿದ ಹಿನ್ನಲೆಯಲ್ಲಿ ಕೃಷ್ಣರಾಜ್ ಅವರು ಸೆ 30 ರಂದು ಮನೆಗೆ ಬಂದು ನೋಡಿದಾಗ ಮನೆಯ ಮೇಲ್ಚಾವಣಿಯ ಹಂಚುಗಳನ್ನು ಯಾರೋ ಕಳ್ಳರು ತೆಗೆದು ಮನೆಯೊಳಗೆ ಇಳಿದು ಬೆಲೆಬಾಳುವ ತಾಮ್ರ, ಹಿತ್ತಾಳೆ, ಕಂಚು, ಬೆಳ್ಳಿ ಗ್ಲಾಸ್, ಪಾತ್ರೆ, ಬಿಂದಿಗೆ, ಹಂಡೆ ಮೊದಲಾದ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ ಸುಮಾರು 62,200/- ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment