ಉಪ್ಪಿನಂಗಡಿ, ಅಕ್ಟೋಬರ್ 02, 2024 (ಕರಾವಳಿ ಟೈಮ್ಸ್) : ಮನೆಯ ಶೆಡ್ಡಿನಲ್ಲಿದ್ದ ಕಾರು ತೆಗೆಯುವ ವೇಳೆ ಮನೆಯ ಸೀಟೌಟಿನಲ್ಲಿದ್ದ 9 ವರ್ಷದ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟ ಘಟನೆ ಕೊಕ್ಕಡ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಮೃತ ಬಾಲಕನನ್ನು ಇಲ್ಲಿನ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ನವಾಫ್ ಇಸ್ಮಾಯಿಲ್ (9) ಎಂದು ಹೆಸರಿಸಲಾಗಿದೆ. ಹಮೀದ್ ಅವರ ಮನೆಯ ಶೆಡ್ಡಿನಲ್ಲಿದ್ದ ಇಕೋ ಕಾರನ್ನು ಹಮೀದ್ ಅವರ ಸಹೋದರನ ಪುತ್ರ ಮಹಮ್ಮದ್ ತಬ್ಶೀರ್ ಎಂಬಾತ ಶೆಡ್ಡಿನಿಂದ ತೆಗೆಯುತ್ತಿದ್ದ ವೇಳೆ ಮನೆಯ ಸೀಟೌಟಿನಲ್ಲಿದ್ದ ನವಾಫ್ ಇಸ್ಮಾಯಿಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮಗುವಿನ ಕಾಲಿಗೆ, ಹೊಟ್ಟೆಗೆ ಹಾಗೂ ತಲೆಗೆ ಗಂಭೀರ ಗಾಯವಾಗಿರುತ್ತದೆ.
ತಕ್ಷಣ ಆತನನ್ನು ಅಂಬ್ಯುಲೆನ್ಸ್ ಮೂಲಕ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಹಮೀದ್ ಅವರ ಅಣ್ಣ ಅಬ್ದುಲ್ ರಹೀಂ ಎಂ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment