ಮೈಸೂರು, ಅಕ್ಟೋಬರ್ 01, 2024 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನ ಬಗ್ಗೆ, ಇಸ್ಲಾಮಿನ ಪ್ರವಾದಿಗಳ ಬಗ್ಗೆ, ಕುರ್ ಆನಿನ ಬಗ್ಗೆ, ಇಸ್ಲಾಮೀ ಸಿದ್ದಾಂತಗಳ ಬಗ್ಗೆ, ಇಸ್ಲಾಂ ಸ್ಮಾರಕಗಳ ಬಗ್ಗೆ ಕೆಲವೊಂದು ಮಂದಿಗಳು ಬೇಕಾ ಬಿಟ್ಟಿಯಾಗಿ ವಿಮರ್ಶಿಸಿ ವಿನಾ ಕಾರಣ ಕೋಮು ಸಂಬಂಧಿತ ಅರಾಜಕತೆ ಉಂಟುಮಾಡಲಾಗುತ್ತಿದ್ದರೂ ಮುಸ್ಲಿಂ ನಾಮದಿಂದ ರಾಜಕೀಯ, ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ಮುಸ್ಲಿಂ ನಾಯಕರುಗಳು ಯಾಕಾಗಿ ಇನ್ನೂ ತುಟಿ ಪಿಟಕ್ಕೆನ್ನುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಮೈಸೂರು ಅತಾಯೇ ರಸೂಲ್ ಮೂವ್‍ಮೆಂಟ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಆತಂಕ ವ್ಯಕ್ತಪಡಿಸಿದರು.
ಮೈಸೂರು ಅತಾಯೇ ರಸೂಲ್ ಮೂವ್‍ಮೆಂಟ್ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಿಲಾದ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ಅಥವಾ ಮುಸ್ಲಿಂ ಹೆಸರಿನಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಅಧಿಕಾರಕ್ಕೆ ಬಂದು ಅಧಿಕಾರ ಅನುಭವಿಸುತ್ತಿರುವ ಮುಸ್ಲಿಂ ಮುಖಂಡರು ಯಾವುದೇ ರಾಜಕೀಯ ಪಕ್ಷ-ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರೂ ಪರವಾಗಿಲ್ಲ. ಇಸ್ಲಾಂ ಧರ್ಮದ ಸಿದ್ದಾಂತಗಳ ಬಗ್ಗೆ ಅವಹೇಳನಕಾರಿ ನಿಂದಿಸಿ ಆ ಮೂಲಕ ಪವಿತ್ರ ಇಸ್ಲಾಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸುವುದಲ್ಲದೆ ಸಮಾಜದಲ್ಲಿ ಅರಾಜಕತೆ, ಅಸಹಿಷ್ಣುತೆ, ಕೋಮು ಭಾವನೆ ಕೆರಳಿಸುವ ಸನ್ನಿವೇಶ ಸೃಷ್ಟಿಸುತ್ತಿರುವ ಬಗ್ಗೆ ಕಠಿಣ ಶಬ್ದಗಳಲ್ಲಿ ಖಂಡಿಸುವುದರ ಜೊತೆಗೆ ಇಸ್ಲಾಮಿನ ಸಂದೇಶಗಳನ್ನು ಸಮಾಜಕ್ಕೆ ನೀಡುವ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಈ ಸಂದರ್ಭ ಖ್ವಾಜಾ ಬಲ್ಹರಿ ಶಾ ಚಿಶ್ತಿ, ಮುಫ್ತಿ ಮುಶ್ತಾಕ್ ಅಹ್ಮದ್ ಮಖ್‍ಬೂಲಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment