ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿದ ಮತದಾರ ಪ್ರಭುಗಳು : ಉಪಚುನಾವಣೆ ವಿಜಯಕ್ಕೆ ಅಬ್ಬಾಸ್ ಅಲಿ ಸಂತಸ - Karavali Times ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿದ ಮತದಾರ ಪ್ರಭುಗಳು : ಉಪಚುನಾವಣೆ ವಿಜಯಕ್ಕೆ ಅಬ್ಬಾಸ್ ಅಲಿ ಸಂತಸ - Karavali Times

728x90

23 November 2024

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿದ ಮತದಾರ ಪ್ರಭುಗಳು : ಉಪಚುನಾವಣೆ ವಿಜಯಕ್ಕೆ ಅಬ್ಬಾಸ್ ಅಲಿ ಸಂತಸ

ಬಂಟ್ವಾಳ, ನವೆಂಬರ್ 23, 2024 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಪ್ರತಿಷ್ಠೆಯ ಕಣವಾಗಿ ತೀವ್ರ ಕುತೂಹಲ ಹುಟ್ಟಿಸಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದು, ಇದು ರಾಜ್ಯ ಸರಕಾರ ಜನರಪರ, ಬಡವರ ಪರವಾಗಿ ಜಾರಿಗೆ ತಂದಿದ್ದ ಗ್ಯಾರಂಟಿ ಯೋಜನೆಗಳ ಪ್ರತಿಫಲನ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಸಂತಸ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸರಕಾರದ ಎಲ್ಲ ಕ್ಯಾಬಿನೆಟ್ ಮಂತ್ರಿಗಳ ಜನಪರ ಆಡಳಿತ ಹಾಗೂ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಬಡವರ ಪರ ಘೋಷಿಸಿ ಯಥಾವತ್ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಪ್ರಯೋಜನ ಪಡೆದ ಜನ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಅಂಕಗಳನ್ನು ನೀಡಿ ಜನಪರ, ಬಡವರ ಪರ, ಶೋಷಿತರ ಪರ ಇರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಂದೆಯೂ ಗಟ್ಟಿ ನೆಲೆ ಕಾಣಲಿದೆ ಎಂಬ ಸಂದೇಶ ನೀಡಿದ್ದಾರೆ ಎಂದಿರುವ ಅಬ್ಬಾಸ್ ಅಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿ ಕ್ಲೀನ್ ಸ್ವೀಪ್ ಸಾಧನೆಗೆ ಕಾರಣಕರ್ತರಾದ ಎಲ್ಲ ಮತದಾರ ಬಂಧುಗಳಿಗೆ, ಅಭ್ಯರ್ಥಿಗಳ ಪರ ಆಹೋರಾತ್ರಿ ಕೆಲಸ ಮಾಡಿದ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಹಾಗೂ ಜನರಿಗೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನಪರವಾಗಿ ನಡೆದುಕೊಂಡಿರುವ ಪಕ್ಷದ ಹೈಕಮಾಂಡ್ ಮಟ್ಟದ ನಾಯಕರಿಗೂ ಕೃತಜ್ಞತೆಗಳು ಎಂದವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿದ ಮತದಾರ ಪ್ರಭುಗಳು : ಉಪಚುನಾವಣೆ ವಿಜಯಕ್ಕೆ ಅಬ್ಬಾಸ್ ಅಲಿ ಸಂತಸ Rating: 5 Reviewed By: karavali Times
Scroll to Top