ಜನವರಿ 4-5 ರಂದು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 23ನೇ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನ : ಮೆರವಣಿಗೆ ಮೆರುಗು ಹೆಚ್ಚಿಸಲು ಸಂಘ-ಸಂಸ್ಥೆಗಳಿಗೆ ಅವಕಾಶ - Karavali Times ಜನವರಿ 4-5 ರಂದು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 23ನೇ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನ : ಮೆರವಣಿಗೆ ಮೆರುಗು ಹೆಚ್ಚಿಸಲು ಸಂಘ-ಸಂಸ್ಥೆಗಳಿಗೆ ಅವಕಾಶ - Karavali Times

728x90

24 November 2024

ಜನವರಿ 4-5 ರಂದು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 23ನೇ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನ : ಮೆರವಣಿಗೆ ಮೆರುಗು ಹೆಚ್ಚಿಸಲು ಸಂಘ-ಸಂಸ್ಥೆಗಳಿಗೆ ಅವಕಾಶ

ಬಂಟ್ವಾಳ, ನವೆಂಬರ್ 24, 2024 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 2025 ರ ಜನವರಿ 4 ರ ಶನಿವಾರ ಹಾಗೂ 5 ರ ಭಾನುವಾರದಂದು ನಡೆಯುವ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಜನವರಿ 4 ರಂದು ಮಧ್ಯಾಹ್ನ 3 ಗಂಟೆಗೆ ಕುಕ್ಕಾಜೆಯಿಂದ ಮೆರವಣಿಗೆ ಹೊರಟು ಮಂಚಿಕಟ್ಟೆಯಿಂದ ಕಾಲ್ನಡಿಗೆಯಲ್ಲಿ ಸಹಸ್ರ ಜನರ ಕೂಡುವಿಕೆಯೊಂದಿಗೆ ಸಮ್ಮೇಳನ ಸ್ಥಳಕ್ಕೆ ಸಾಗಿ ಬರಲಿದೆ. ಈ ಸಂದರ್ಭ ಸಹಕರಿಸುವ ಸಂಘ ಸಂಸ್ಥೆಗಳು ಮೆರವಣಿಗೆಗೆ ಮೆರುಗನ್ನು ನೀಡಲು ವೇಷ ಭೂಷಣ, ನಾಸಿಕ್ ಬ್ಯಾಂಡ್, ಬ್ಯಾಂಡ್ ಸೆಟ್, ವಾದ್ಯ ಸೆಟ್, ಚೆಂಡೆ, ಡೋಲು ವಾದನ, ಬೊಂಬೆ ಕುಣಿತ, ಹುಲಿ, ಕರಡಿ ಇನ್ನಿತರ ಜನಪದ ಕುಣಿತ, ಟ್ಯಾಬ್ಲೋ, ಯಕ್ಷಗಾನ ವೇಷಗಳು ಮುಂತಾದ ವ್ಯವಸ್ಥೆಗಳನ್ನು ಮಾಡಲು ಅವಕಾಶವಿದೆ. ಈ ಕುರಿತು ಸಂಘ-ಸಂಸ್ಥೆಗಳು ಗಮನ ಹರಿಸುವಂತೆ ಸಮ್ಮೇಳನ ಸಮಿತಿ ಸೂಚಿಸಿದೆ. ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ಸಮ್ಮೇಳನದ ವೇದಿಕೆಂಯಲ್ಲಿ ನೀಡಿ ಗೌರವಿಸಲಾಗುವುದು ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರು, ಸಂಚಾಲಕರು, ಪ್ರಧಾನ ಕಾರ್ಯದರ್ಶಿ, ಪ್ರಧಾನ ಸಂಯೋಜಕರು ಹಾಗೂ ಸರ್ವ ಪದಾಧಿಕಾರಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 4-5 ರಂದು ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 23ನೇ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನ : ಮೆರವಣಿಗೆ ಮೆರುಗು ಹೆಚ್ಚಿಸಲು ಸಂಘ-ಸಂಸ್ಥೆಗಳಿಗೆ ಅವಕಾಶ Rating: 5 Reviewed By: karavali Times
Scroll to Top