ತುಂಬೆ ದೇವಸ್ಥಾನ ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಮೂವರು ಕುಖ್ಯಾತ ಖದೀಮರು ಅಂದರ್, ಲಕ್ಷಾಂತರ ಮೌಲ್ಯದ ಆಭರಣ, ಕಾರು ವಶಕ್ಕೆ - Karavali Times ತುಂಬೆ ದೇವಸ್ಥಾನ ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಮೂವರು ಕುಖ್ಯಾತ ಖದೀಮರು ಅಂದರ್, ಲಕ್ಷಾಂತರ ಮೌಲ್ಯದ ಆಭರಣ, ಕಾರು ವಶಕ್ಕೆ - Karavali Times

728x90

24 November 2024

ತುಂಬೆ ದೇವಸ್ಥಾನ ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಮೂವರು ಕುಖ್ಯಾತ ಖದೀಮರು ಅಂದರ್, ಲಕ್ಷಾಂತರ ಮೌಲ್ಯದ ಆಭರಣ, ಕಾರು ವಶಕ್ಕೆ

ಬಂಟ್ವಾಳ, ನವೆಂಬರ್ 24, 2024 (ಕರಾವಳಿ ಟೈಮ್ಸ್) : ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 4 ರಂದು ನಡೆದ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿ ಕಳವುಗೈದ ಸೊತ್ತು ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಚೆರ್ವತ್ತೂರು ಗ್ರಾಮದ ಕೋತಂಕರ-ಪಿಲಾವಲಪ್ಪು ನಿವಾಸಿ ಬಶೀರ್ ಕೆ ಪಿ ಯಾನೆ ಆಕ್ರಿ ಬಶೀರ್ (44), ಕೊಲ್ಲಂ ಜಿಲ್ಲೆಯ ಕುರುನಾಗಪಲ್ಲಿ ತಾಲೂಕಿನ ಆಲಪ್ಪಾಡ್ ಗ್ರಾಮದ ನಿವಾಸಿ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್ (46) ಹಾಗೂ ಬಂಟ್ವಾಳ ತಾಲೂಕು, ಪುದು ಗ್ರಾಮದ ನಿವಾಸಿ ಎಫ್ ಜೆ ಮಹಮ್ಮದ್ ಇಸ್ಮಾಯಿಲ್ (53) ಎಂದು ಹೆಸರಿಸಲಾಗಿದೆ. 

ಆರೋಪಿಗಳು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 4 ರಂದು ರಾತ್ರಿ ಬೆಳ್ಳಿಯ ಆಭರಣಗಳನ್ನು ಹಾಗೂ ನಗದನ್ನು ಕಳವುಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಬಂಟ್ವಾಳ ತಾಲೂಕಿನ ಇರಾ ಎಂಬಲ್ಲಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.25 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳ ಪೈಕಿ ಬಶೀರ್ ಕೆ ಪಿ ಎಂಬಾತ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್ ಎಂಬಾತನ ವಿರುದ್ದ 3 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಬಂಧನ ಕಾರ್ಯಾಚರಣೆಯು ಜಿಲ್ಲಾ ಎಸ್ಪಿ ಯತೀಶ್ ಎನ್ ಹಾಗೂ ಎಡಿಶನಲ್ ಎಸ್ಪಿ ರಾಜೇಂದ್ರ ಡಿ ಎಸ್ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿವೈಎಸ್ಪಿ ಎಸ್ ವಿಜಯಪ್ರಸಾದ್ ಅವರ ನೇತೃತ್ವದ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಮತ್ತು ಪೂಂಜಾಲಕಟ್ಟೆ ಠಾಣಾ ಪಿಎಸ್ಸೈ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈಗಳಾದ ಹರೀಶ್ ಎಂ ಆರ್, ಲೋಲಾಕ್ಷ ಹಾಗೂ ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್ ಎಂ, ಅದ್ರಾಮ, ಹರಿಶ್ಚಂದ್ರ, ನಝೀರ್, ಕೃಷ್ಣ ನಾಯ್ಕ್, ಸಂತೋಷ್, ರಾಹುಲ್ ರಾವ್, ಅಶೋಕ್, ವಿವೇಕ್ ಕೆ,  ಕುಮಾರ್ ಎಚ್ ಕೆ, ಬಸವರಾಜ್, ರಂಜಾನ್, ಕುಮಾರ, ಮಹಾಂತೇಶ್ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ ಅವರುಗಳ ತಂಡ ನಡೆಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ದೇವಸ್ಥಾನ ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು : ಮೂವರು ಕುಖ್ಯಾತ ಖದೀಮರು ಅಂದರ್, ಲಕ್ಷಾಂತರ ಮೌಲ್ಯದ ಆಭರಣ, ಕಾರು ವಶಕ್ಕೆ Rating: 5 Reviewed By: karavali Times
Scroll to Top