ಬಂಟ್ವಾಳದ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಶಾಂತಿಯುತ ಮತದಾನ, ನ 26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ - Karavali Times ಬಂಟ್ವಾಳದ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಶಾಂತಿಯುತ ಮತದಾನ, ನ 26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ - Karavali Times

728x90

24 November 2024

ಬಂಟ್ವಾಳದ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಶಾಂತಿಯುತ ಮತದಾನ, ನ 26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ

ಬಂಟ್ವಾಳ, ನವೆಂಬರ್ 24, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 11 ಸ್ಥಾನಗಳಿಗೆ ಶನಿವಾರ ಉಪಚುನಾವಣೆ ನಡೆಯಿತು. 

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಶಾಂತಿಯುತ ಹಾಗೂ ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆದಿದೆ. ಬಂಟ್ವಾಳ ಪುರಸಭೆಯ 2ನೇ ಬಿ ಕಸ್ಬಾ ವಾರ್ಡಿನ ಉಪ ಚುನಾವಣೆಯ ಮತದಾನ ಮಂಡಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, 72 ಶೇಕಡಾ ಮತದಾನ ದಾಖಲಾಗಿದೆ. 

ಉಳಿದಂತೆ ಪಂಚಾಯತ್ ವ್ಯಾಪ್ತಿಯ ಸಜಿಪಮುನ್ನೂರು ಗ್ರಾಮ ಪಂಚಾಯತಿನ 2 ಸ್ಥಾನಗಳಿಗೆ ಮೂರು ಬೂತ್ ಗಳಲ್ಲಿ ಮತದಾನ ನಡೆದಿದ್ದು, ಕ್ರಮವಾಗಿ 66 ಶೇಕಡಾ, 61 ಶೇಕಡಾ ಹಾಗೂ 55 ಶೇಕಡಾ ಮತದಾನ ನಡೆದಿದೆ. ಮಂಚಿ ಗ್ರಾಮದ 1 ಸ್ಥಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ 71 ಶೇಕಡಾ,  ಬಿಳಿಯೂರಿನಲ್ಲಿ 69 ಶೇಕಡಾ, ಕುಡಂಬೆಟ್ಟು 65 ಶೇಕಡಾ, ಸಜಿಪಮೂಡದಲ್ಲಿ 76 ಶೇಕಡಾ, ಪಂಜಿಕಲ್ಲು 75 ಶೇಕಡಾ, ಪಂಜಿಕಲ್ಲು 74 ಶೇಕಡಾ, ಅಮ್ಟಾಡಿಯಲ್ಲಿ 67 ಶೇಕಡಾ, ಬಡಗಬೆಳ್ಳೂರು 69 ಶೇಕಡಾ ಮತದಾನವಾಗಿದೆ ಎಂದು ತಾಲೂಕು ಕಛೇರಿ ಮಾಹಿತಿ ತಿಳಿಸಿದೆ. ನವೆಂಬರ್ 26 ರಂದು ಮಂಗಳವಾರ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಫಲಿತಾಂಶ ಲಭ್ಯವಾಗಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಶಾಂತಿಯುತ ಮತದಾನ, ನ 26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ Rating: 5 Reviewed By: karavali Times
Scroll to Top