ಬಂಟ್ವಾಳ, ಮಾರ್ಚ್ 18, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ವೀರ ಮಾರುತಿ ಅಂಗನವಾಡಿ ಕೇಂದ್ರದ ಆಧುನೀಕರಣಗೊಂಡ ನೂತನ ಹೈಟೆಕ್ ಅಂಗನವಾಡಿ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮಂಗಳವಾರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭ ಸ್ಥಳೀಯ ಪ್ರಮುಖ ಸದಾಶಿವ ಕುಲಾಲ್, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಕೋಡಿಮಜಲು, ಪುರುಷೋತ್ತಮ ಎಸ್, ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಅಧ್ಯಕ್ಷ ಉಮೇಶ್ ಕೋಡಿಮಜಲು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಐಶ್ವರ್ಯ, ಸದಸ್ಯರಾದ ಚಂದ್ರಹಾಸ ಕೋಡಿಮಜಲು, ವಿಶ್ವನಾಥ್ ಕುಲಾಲ್, ಯೋಗಿಶ್, ವೀರ ಮಾರುತಿ ಮಹಿಳಾ ಮಂಡಳಿ ಅಧ್ಯಕ್ಷೆ ಹರಿಣಾಕ್ಷಿ, ಸ್ತ್ರೀಶಕ್ತಿ ಸದಸ್ಯರು, ಮಕ್ಕಳ ಪೆÇೀಷಕರು ಹಾಗೂ ಅಂಗನವಾಡಿ ಶಿಕ್ಷಕಿ ಹಾಗೂ ಸಹಶಿಕ್ಷಕಿಯರು ಉಪಸ್ಥಿತರಿದ್ದರು.
0 comments:
Post a Comment