ಬಂಟ್ವಾಳ, ಮಾರ್ಚ್ 17, 2025 (ಕರಾವಳಿ ಟೈಮ್ಸ್) : ಖಾಸಗಿ ಬಸ್ಸಿನಿಂದ ಕೆಳಗೆ ಬಿದ್ದು 9 ವರ್ಷದ ಬಾಲಕಿ ಗಾಯಗೊಂಡ ಘಟನೆ ಬಡಗಬೆಳ್ಳೂರು ಎಂಬಲ್ಲಿ ಶನಿವಾರ ಸಂಭವಿಸಿದೆ.
ಗಾಯಗೊಂಡ ಬಾಲಕಿಯನ್ನು ಇಲ್ಲಿನ ದರ್ಖಾಸು ನಿವಾಸಿ ಮಯ್ಯದ್ದಿ ಎಂಬವರ ಪುತ್ರಿ ಹವ್ವಾ ಸುವೈಬ (9) ಎಂದು ಹೆಸರಿಸಲಾಗಿದೆ. ಈಕೆ ತನ್ನ ತಾಯಿ ಆತಿಕಾ ಬಾನು ಜೊತೆ ಮೂಡಬಿದ್ರೆಯ ಸಂಬಂಧಿಕರ ಮನೆಗೆ ಹೋಗಿ ಶನಿವಾರ ಬೆಳಿಗ್ಗೆ ವಾಪಾಸು ಬರುತ್ತಿದ್ದ ವೇಳೆ ನವದುರ್ಗಾ ಎಂಬ ಖಾಸಗಿ ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸಿನ ಚಾಲಕ ರೋನಾಲ್ಡ್ ಡಿ ಸೋಜ ಎಂಬವರು ದುಡುಕುತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಬಾಲಕಿ ರಸ್ತೆ ಬಿದ್ದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬಾಲಕಿಯ ಹಣೆ ಹಾಗೂ ತಲೆಗೆ ಗಾಯಗಳಾಗಿದ್ದು, ಮಂಗಳೂರು ಎ ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment