ಬಂಟ್ವಾಳ, ಮಾರ್ಚ್ 17, 2025 (ಕರಾವಳಿ ಟೈಮ್ಸ್) : ವಿವಾಹಿತ ಮಹಿಳೆಯೋರ್ವರು ತುಂಬೆಯ ವಸತಿಗೃಹವೊಂದರ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೂಲತಃ ಕಾರ್ಕಳ ತಾಲೂಕಿನ ಸಚ್ಚರಿಪೇಟೆ-ತಿಲಕ್ ನಗರ ನಿವಾಸಿ, ಬಂಟ್ವಾಳ ತಾಲೂಕಿನ ನಂದಾವರಕ್ಕೆ ವಿವಾಹವಾಗಿ ಬಂದಿದ್ದ ಬಳಿಕ ಪತಿಯಿಂದ ಪರಿತ್ಯಕ್ತಗೊಂಡಿದ್ದ ಮೈಮೂನಾ (35) ಎಂದು ಹೆಸರಿಸಲಾಗಿದೆ.
ಮೈಮೂನಾಳಿಗೆ ಸುಮಾರು 15 ವರ್ಷಗಳ ಹಿಂದೆ ನಂದಾವರ ನಿವಾಸಿ ಸುಹೇಲ್ ಶೇಖ್ ಎಂಬವರ ಜೊತೆ ವಿವಾಹವಾಗಿದ್ದು, 3 ಮಂದಿ ಮಕ್ಕಳಿದ್ದಾರೆ. ಆದರೆ ಗಂಡನ ಜೊತೆ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆಯಾಗದ ಕಾರಣಕ್ಕೆ ಗಂಡ ಸುಹೇಲ್ ಶೇಖ್ ಪತ್ನಿಯನ್ನು ಬಿಟ್ಟು ತನ್ನ ಮೂವರು ಮಕ್ಕಳೊಂದಿಗೆ ತೆರಳಿ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ ಎನ್ನಲಾಗಿದೆ.
ಬಳಿಕ ನಂದಾವರದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೈಮೂನಾ ತನ್ನ ಅಕ್ಕಳಿಗೆ ಕರೆ ಮಾಡಿ ಗಂಡ ಮತ್ತು ಮಕ್ಕಳು ಬಿಟ್ಟು ಹೋದ ಬಗ್ಗೆ ಕೊರಗುತ್ತಿದ್ದಳು ಎನ್ನಲಾಗಿದೆ. ಭಾನುವಾರ ಮೈಮೂನಾ ತುಂಬೆಯ ಈಶಾ ಹೋಂಸ್ಟೇ ಸಂಕೀರ್ಣದ 203 ಸಂಖ್ಯೆಯ ಕೊಠಡಿಯಲ್ಲಿ ಕಿಟಕಿಗೆ ವಸತಿಗೃಹದ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಮೈಮುನಾಳು ಕಳೆದ ಒಂದು ತಿಂಗಳ ಹಿಂದೆ ರಜಾಕ್ ಎಂಬವರ ಮೂಲಕ ತುಂಬೆಯ ಹೋಸ್ಟೆಂಯಲ್ಲಿ ಬಂದು ತಂಗಿದ್ದು ರಾತ್ರಿ 9 ಗಂಟೆ ಸುಮಾರಿಗೆ ರಜಾಕ್ ಬಂದು ವಿಚಾರಿಸಿಕೊಂಡು ಹೋಗಿದ್ದ. ಮರುದಿನ ಬೆಳಿಗ್ಗೆ 8.30ರವೇಳೆಗೆ ಹೋಂ ಸ್ಟೇ ರೂಂ ಬಾಯ್ ಬೆಳಗ್ಗಿನ ತಿಂಡಿ ನಿ£ೀಡಲು ಹೋದಾಗ ಕೊಠಡಿಯ ಬಾಗಿಲು ಮುಚ್ಚಿಕೊಂಡಿದ್ದು, ಬಾಗಿಲು ತೆಗೆಯದೇ ಇದ್ದುದರಿಂದ ಸಂಶಯಗೊಂಡು ಹೋಂಸ್ಟೇಗೆ ಸೇರಿಸಿದ್ದ ರಜಾಕ್ ಅವರನ್ನು ಕರೆಯಿಸಿ ಬಾಗಿಲ ಚಿಲಕ ಮುರಿದು ತೆಗೆದು ಒಳಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಈ ಬಗ್ಗೆ ಮೃತರ ಸಹೋದರಿ ನಜೀಮಾ (40) ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment