ಬಂಟ್ವಾಳ, ಎಪ್ರಿಲ್ 28, 2025 (ಕರಾವಳಿ ಟೈಮ್ಸ್) : ಗೆಜ್ಜೆಗಿರಿ ಮೇಳದವರಿಂದ ಯಕ್ಷೋತ್ಸವ-2025 ಕಾರ್ಯಕ್ರಮ ಬಿ ಸಿ ರೋಡಿನ ಚಂಡಿಕಾ ಪರಮೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಮಾತನಾಡಿ, ಉಪನಿಷತ್ತ್, ಭಗವದ್ಗೀತೆ, ಇದನ್ನು ಜನ ಸಾಮಾನ್ಯರು ತಿಳಿದಿರುವುದು ಅಪರೂಪ. ಆದರೆ ಯಕ್ಷಗಾನದ ಮೂಲಕ ಇದನ್ನು ತಿಳಿಯುವುದು ಸಾಧ್ಯ. ಯಕ್ಷಗಾನದಿಂದ ನಮ್ಮ ಜೀವನದ ಮೂಲ ಚಿಂತನೆಯ ಅರಿವು ಉಂಟಾಗುತ್ತದೆ. ದುಷ್ಟರ ನಾಶವಾಗಿ ಶಿಷ್ಟರ ರಕ್ಷಣೆಯ ಬಗ್ಗೆಯೂ ಯಕ್ಷಗಾನದಲ್ಲಿ ತಿಳಿಯುತ್ತದೆ ಎಂದರು.
ಈ ಸಂದರ್ಭ ಮೇಳದ ಕಲಾವಿದರಾದ ಲಕ್ಣ್ಮಣ್ ಗೌಡ ಮುಚ್ಚೂರು, ದಾಮೋದರ ಪಾಟಾಳಿ, ದತ್ತೇಶ್ ಮಾವಿನಕಟ್ಡೆ, ಶ್ರೀಶ ಭಟ್ ಪೆÇಳಲಿ, ವಿಶ್ವನಾಥ ಕುಲಾಲ್ ಪದ್ಮುಂಜ ಮತ್ತು ಬಾಬಣ್ಣ ಪಾರೆಂಕಿ ಮಡಂತ್ಯಾರ್ ಅವರನ್ನು ಸನ್ಮಾನಿಸಲಾಯಿತು.
ಮೇಳದ ಪ್ರಧಾನ ಭಾಗವತ ಯೋಗೀಶ್ ಶರ್ಮ ಅಳದಂಗಡಿ, ಪ್ರಸಂಗಕರ್ತ ನಿತಿನ್ ಕುಮಾರ್ ತೆಂಕಕಾರಂದೂರು, ಹಿಮ್ಮೇಳ ಕಲಾವಿದ ಗಣಪತಿ ಭಟ್, ಉದ್ಯಮಿ ಭರತ್ ಅಂಚನ್ ಮೊದಲಾದವರು ಭಾಗವಹಿಸಿದ್ದರು.
ಮೇಳದ ಮ್ಯಾನೇಜರ್ ದೀಪಕ್ ಕೋಟ್ಯಾನ್ ಸಜಿಪ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಪೂಜಾರಿ ಸಜಿಪ ವಂದಿಸಿದರು. ಯಕ್ಷೋತ್ಸವ ಕಾರ್ಯಕ್ರಮದಲ್ಲಿ ದೇವು ಪೂಂಜ ಪ್ರತಾಪ ಬಯಲಾಟ ನಡೆಯಿತು.
0 comments:
Post a Comment