ಬಂಟ್ವಾಳ, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಆಲಡ್ಕ-ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೈಖುನಾ ಬಿ ಎಚ್ ಅಬೂಸ್ವಾಲಿಹ್ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಜಂ-ಇಯ್ಯತು ಮಿಸ್ಬಾಹಿಲ್ ಹುದಾ (ರಿ) ಕಿಲ್ಲೂರು ಇದರ 24ನೇ ವಾರ್ಷಿಕ ಮಹಾಸಭೆ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮಗಳು ಎಪ್ರಿಲ್ 26 ರ ಶನಿವಾರ ಬೆಳಿಗ್ಗೆ 9.30 ರಿಂದ ದಾರುಶ್ಶರೀಫ್ ಕಿಲ್ಲೂರು ಇಲ್ಲಿನ ಮರ್‍ಹೂಂ ಹಾಜಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಲಾಲಿಯ್ಯಾ ರಾತೀಬ್, ಬುರ್‍ದಾ ಮಜ್ಲಿಸ್, ಖತಮುಲ್ ಕುರ್-ಆನ್, ದುವಾ, ನಸೀಹತ್ ಹಾಗೂ ಮೌಲಿದ್ ಪಾರಾಯಣ ನಡೆಯಲಿದ್ದು, ಉಡುಪಿ-ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಉದ್ಘಾಟಿಸುವರು. ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಹಾಗೂ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಅವರು ಜಲಾಲಿಯ್ಯಾ ರಾತೀಬ್ ನೇತೃತ್ವ ವಹಿಸಲಿದ್ದಾರೆ. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರು ಖತಮುಲ್ ಕುರ್-ಆನ್ ನೇತೃತ್ವ ವಹಿಸಲಿದ್ದು, ಶೈಖುನಾ ಬಿ ಎಚ್ ಉಸ್ತಾದ್ ಅಧ್ಯಕ್ಷತೆ ವಹಿಸುವರು.
ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಸಯ್ಯಿದ್ ಬದ್ರುದ್ದೀನ್ ತಂಙಳ್ ಪೊಮ್ಮಾಜೆ, ಪೆರ್ನೆ ಉಸ್ತಾದ್ (ಅಬ್ಬಾಸ್ ಸಅದಿ), ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪೂಂಜಾಲಕಟ್ಟೆ ಉಸ್ತಾದ್ (ಮುಹಮ್ಮದ್ ಬಾಖವಿ), ಕಾಸಿಂ ಮದನಿ ಕರಾಯ, ಕಾರ್ಕಳ-ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಬಿ ಎ ಶರೀಫ್ ಸಅದಿ ಅಲ್-ಕಾಮಿಲಿ ಕಿಲ್ಲೂರು, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನಾಕ, ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ, ಕಾಜೂರು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಕೆ ಯು ಇಬ್ರಾಹಿಂ, ಮಿಸ್ಬಾಹಿಲ್ ಹುದಾ ಅಧ್ಯಕ್ಷ ಹಾಜಿ ಎನ್ ಎಚ್ ಆದಂ ಫೈಝಿ ನೆಹರುನಗರ, ಕಾರ್ಯದರ್ಶಿ ಪಿ ಎಸ್ ತ್ವಾಹಾ ಸಅದಿ ಸಅದಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ವೇಳೆ ಸಯ್ಯಿದ್ ಬಶರ್ ಬುರ್‍ದಾ ಸಂಘ ಅಜಿಲಮೊಗರು ಹಾಗೂ ಆಶಿಕುರ್ರಸೂಲ್ ಬುರ್‍ದಾ ಸಂಘ ಆಲಡ್ಕ-ಪಾಣೆಮಂಗಳೂರು ಇವರಿಂದ ಬುರ್‍ದಾ ಆಲಾಪನೆ ನಡೆಯಲಿದೆ ಎಂದು ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಪ್ರಕಟಣೆ ತಿಳಿಸಿದೆ.
0 comments:
Post a Comment