ಬಂಟ್ವಾಳ, ಎಪ್ರಿಲ್ 28, 2025 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರು ಹಳೆಯ ಶೆಡ್‍ವೊಂದರಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡ್ಕಿದು ಗ್ರಾಮದ ಕಾರ್ಯಾಡಿ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಡ್ಕಿದು ಗ್ರಾಮದ ದೇವಸ್ಯ ಮನೆ ನಿವಾಸಿ ಚಂದ್ರಹಾಸ ಸಪಲ್ಯ (48) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಇವರ ಪುತ್ರ ಲಿಖಿತ್ ಸಿ ಡಿ ಅವರು ಪೊಲೀಸರಿಗೆ ದೂರು ನೀಡಿದ್ದು, ತಂದೆ ಚಂದ್ರಹಾಸ ಸಪಲ್ಯ ಅವರು ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದರು. ಭಾನುವಾರ ಇವರು ಬಾಡಿಗೆ ಮನೆಯಿಂದ ಹೊಸ ಮನೆ ಕಾಮಗಾರಿ ಅಗುತ್ತಿರುವ ಸ್ಥಳಕ್ಕೆ ಬರುತ್ತಿರುವಾಗ ಮಧ್ಯಾಹ್ನ 12.10ರ ವೇಳೆಗೆ ಇಡ್ಕಿದು ಗ್ರಾಮದ ಕಾರ್ಯಾಡಿ ರಸ್ತೆಯ ಅಶ್ರಫ್ ಎಂಬವರ ಹಳೇ ಶೆಡ್ಡಿನ ಹೊರಭಾಗ ಪಕ್ಕಾಸಿಗೆ ತಂದೆಯವರು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಕಂಡು ಬಂದಿದೆ. ತಕ್ಷಣ ನೆರೆಕರೆಯವರೊಂದಿಗೆ ಸೇರಿಕೊಂಡು ತಂದೆಯವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment