ಬಂಟ್ವಾಳ, ಮೇ 22, 2025 (ಕರಾವಳಿ ಟೈಮ್ಸ್) : ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಬುಧವಾರ ಸಂಭವಿಸಿದೆ.
ಗಾಯಗೊಂಡ ದಂಪತಿಯನ್ನು ಕಾರು ಚಾಲಕ ಸ್ಟಾನಿ ಮಾರ್ಟಿನ್ ಡಿಸೋಜ ಹಾಗೂ ಅವರ ಪತ್ನಿ ಜೆಸಿಂತಾ ಡಿ ಸೋಜ ಎಂದು ಹೆಸರಿಸಲಾಗಿದೆ. ದಂಪತಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾರಿಪಳ್ಳ ಎಂಬಲ್ಲಿ ಹಿಂದಿನಿಂದ ಅಂದರೆ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕ ಓವರ್ ಮಾಡುವ ಭರದಲ್ಲಿ ದಂಪತಿ ಸಂಚರಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಎರಡು ಕಾರುಗಳು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರಿನಲ್ಲಿ ದಂಪತಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಸ್ಟಾನಿ ಅವರ ಭಾವ, ಅಮ್ಟಾಡಿ ನಿವಾಸಿ ಪಿಲಿಫ್ ಬೊನವೆಂಚರ್ ಪಿಂಟೋ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment