ಬಂಟ್ವಾಳ, ಮೇ 22, 2025 (ಕರಾವಳಿ ಟೈಮ್ಸ್) : ಹೆದ್ದಾರಿಯ ಡಿವೈಡರ್ ದಾಟಿ ಬಂದ ಕಂಟೈನರ್ ವಾಹನ ಡಿಕ್ಕಿ ಹೊಡೆದು ಪಿಕಪ್ ವಾಹನವೊಂದು ಜಖಂಗೊಂಡ ಘಟನೆ ಪುದು ಗ್ರಾಮದ ಮಾರಿಪಳ್ಳ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಫಾರೂಕ್ (37) ಅವರು ಮಂಗಳವಾರ ರಾತ್ರಿ ಪಿಕಪ್ ವಾಹನವನ್ನು ಉಳ್ಳಾಲ ಉರೂಸ್ ಕಾರ್ಯಕ್ರಮ ಮುಗಿಸಿ ಬಿ ಸಿ ರೋಡು ಕಡೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ರಾತ್ರಿ 11 ಗಂಟೆ ವೇಳೆಗೆ ಪುದು ಗ್ರಾಮದ 10 ಮೈಲಿ ಕಲ್ಲು ಎಂಬಲ್ಲಿ ಎದುರಿನಿಂದಾ ಅಂದರೆ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ವಾಹನವನ್ನು ಅದರ ಚಾಲಕ ದುಡುಕತನ ಹಾಗರ್ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಹೆದ್ದಾರಿಯ ಮಧ್ಯದಲ್ಲಿದ್ದ ಡಿವೈಡರ್ ದಾಟಿ ಬಂದು ಪಿಕಪ್ ವಾಹನದ ಎದುರಿನ ಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಪಿಕಪ್ ವಾಹನದ ಎದುರಿನ ಭಾಗ, ಕ್ಯಾಬಿನ್, ಎಂಜಿನ್, ಡೋರು, ಮಡಗರ್ಡ್ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment