ಬಂಟ್ವಾಳ, ಮೇ 23, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಟಾಟಾ ಮೋಟಾರ್ಸ್ ಎದುರುಗಡೆ ಗುರುವಾರ ಮುಂಜಾನೆ ಸಂಭವಿಸಿದೆ.
ಗಾಯಗೊಂಡ ಅಟೋ ರಿಕ್ಷಾ ಚಾಲಕನನ್ನು ಬಂಟ್ವಾಳ-ಕೆಳಗಿನಪೇಟೆ ನಿವಾಸಿ ಖಾದರ್ ಮುನೀರ್ ಎಂಬವರ ಪುತ್ರ ಮೊಹಮ್ಮದ್ ಅಸ್ಗರ್ ಅಲಿ (31) ಎಂದು ಹೆಸರಿಸಲಾಗಿದೆ. ಇವರು ತನ್ನ ಅಟೋ ರಿಕ್ಷಾದಲ್ಲಿ ಗುರುವಾರ ಮುಂಜಾನೆ 5.40 ರ ವೇಳೆಗೆ ಬಿ ಸಿ ರೋಡಿನಿಂದ ಕಲ್ಲಡ್ಕ ಕಡೆಗೆ ಸಂಚರಿಸುತ್ತಿದ್ದ ವೇಳೆ ಪಾಣೆಮಂಗಳೂರು ಟಾಟಾ ಮೋಟಾರ್ಸ್ ಎದುರುಗಡೆ ತಲುಪುತ್ತಿದ್ದಂತೆ ಎದುರಿನಿಂದ ಮೊಹಮ್ಮದ್ ಶಾಫಿ ಎಂಬಾತ ಚಲಾಯಿಸಿಕೊಂಡು ಬಂದ ನಂಬರ್ ಪ್ಲೇಟ್ ಇಲ್ಲದ ಹೊಸ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಅಸ್ಕರ್ ಅಲಿ ಅವರು ಅಟೋ ರಿಕ್ಷಾ ಸಮೇತ ರಸ್ತೆಗೆ ಬಿದ್ದು ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment