ಬಂಟ್ವಾಳ, ಜೂನ್ 30, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಡೆಂಗ್ಯೂ ಹಾಗೂ ಕೀಟ ಜನ್ಯ ರೋಗಗಳ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಯಿತು.
ಬಂಟ್ವಾಳ ನಗರ ವೈದ್ಯಾಧಿಕಾರಿ ಡಾ ಅಶ್ವಿನಿ ಇವರು ಡೆಂಗ್ಯೂ ಹಾಗೂ ಕೀಟ ಜನ್ಯ ರೋಗಗಳ ಹರಡುವಿಕೆ, ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಶಾಲಾ ಮುಖ್ಯ ಶಿಕ್ಷಕ ಹರಿಪ್ರಸಾದ್, ನಿರೀಕ್ಷಣಾಧಿಕಾರಿ ರಾಕೇಶ್, ಸುರಕ್ಷಣಾಧಿಕಾರಿ ಶ್ರೀಮತಿ ಸಂಧಿಕಾ, ಆಶಾ ಕಾರ್ಯಕರ್ತೆ ಶ್ರೀಮತಿ ಮಂಜುಳಾ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಪಿ ಅಭಿಯಾನದಲ್ಲಿ ಭಾಗವಹಿಸಿದ್ದರು.
0 comments:
Post a Comment