ಬೆಳ್ತಂಗಡಿ, ಜೂನ್ 28, 2025 (ಕರಾವಳಿ ಟೈಮ್ಸ್) : ಟಿಪ್ಪರ್ ಬಾಡಿಗೆ ನೀಡಿದ ಬಾಬ್ತು ಬಾಕಿ ಹಣವನ್ನು ಕೇಳಿದ್ದಕ್ಕೆ ವ್ಯಕ್ತಿಗೆ ಆರೋಪಿ ಹಲ್ಲೆ ನಡೆಸಿದ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಹಲ್ಲೆಗೊಳಗಾದವರನ್ನು ಚಿಬಿದ್ರೆ ನಿವಾಸಿ ಮಹಮ್ಮದ್ ತೌಸಿದ್ ಎ (38) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಬೀಟಿಗೆ ನಿವಾಸಿ ರಹೀಂ ಹಾಗೂ ಫಯಾಝ್ ಎಂದು ಹೆಸರಿಸಲಾಗಿದೆ.
ಮಹಮ್ಮದ್ ತೌಸಿದ್ ತನ್ನ ಬಾಬ್ತು ಕೆಎ19 ಎಎ347 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ಬೀಟಿಗೆ ನಿವಾಸಿ ರಹೀಂ ಎಂಬವನಿಗೆ ಕಳೆದ ಎಪ್ರಿಲ್ ತಿಂಗಳಲ್ಲಿ ಬಾಡಿಗೆಗೆ ನೀಡಿರುತ್ತಾರೆ. ಸದ್ರಿ ಸಮಯದ ಬಾಡಿಗೆ ಹಣದಲ್ಲಿ 62,700/- ರೂಪಾಯಿ ರಹೀಂನು ಕೊಡಲು ಬಾಕಿ ಇದ್ದು ಅದನ್ನು ಹಲವಾರು ಬಾರಿ ಕೇಳಿದರು ನಾಳೆ ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಕೊಟ್ಟಿರುವುದಿಲ್ಲ.
ಜೂನ್ 25 ರಂದು ರಹೀಂ ಪೇಟೆಯಲ್ಲಿ ಸಿಕ್ಕಿದಾಗ ಜೂನ್ 27 ರಂದು ಬಾಕಿ ಹಣವನ್ನು ನೀಡುವುದಾಗಿ ತಿಳಿಸಿದಂತೆ ತೌಸಿದ್ ಅವರು ಜೂನ್ 27 ರಂದು ಚಾರ್ಮಾಡಿ ಗ್ರಾಮದ ಬೀಟಿಗೆಯಲ್ಲಿ ಅಂಗಡಿಯ ಹೊರಗಡೆ ಪರಿಚಯಸ್ಥರೊಂದಿಗೆ ಮಾತನಾಡಿಕೊಂಡಿರುವಾಗ, ಮದ್ಯಾಹ್ನ ಸುಮಾರು 2.30ರ ವೇಳೆಗೆ ಅಂಗಡಿ ಬಳಿಗೆ ರಹೀಂ ಮತ್ತು ಫಯಾಝ್ ಅವರು ಕಾರಿನಲ್ಲಿ ಬಂದಿದ್ದಾರೆ. ಈ ಸಂದರ್ಭ ರಹೀಂ ಅವರಲ್ಲಿ ತೌಸೀದ್ ನನ್ನ ಹಣ ಕೊಡು ನಾನು ಹೋಗುತ್ತೇನೆ ಎಂದಾಗ ರಹೀಂ ಹಣ ನೀಡಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದು, ತೌಸಿದಗೆ ಕೈಯಿಂದ ಹಲ್ಲೆ ನಡೆಸಿರುತ್ತಾನೆ. ಆಗ ಅಲ್ಲಿದ್ದವರು ಗಲಾಟೆಯನ್ನು ಬಿಡಿಸಿದ್ದು, ನಂತರ ರಹೀಂ ಅಂಗಡಿಯ ಹೊರಗಡೆ ಇಟ್ಟಿದ್ದ ಸೋಡಾ ಬಾಟ್ಲಿಯಿಂದ ಕೊಲ್ಲುವ ಉದ್ದೇಶದಿಂದ ತೌಸಿದ್ ತಲೆಗೆ ಒಡೆಯಲು ಬಂದಾಗ ಆತ ತಪ್ಪಿಸಿಕೊಂಡಿದ್ದಾನೆ. ಆಗ ರಹೀಂ ಬಾಟ್ಲಿಯಿಂದ ತೌಸಿದನ ಎಡಬಾಗದ ಕಣ್ಣಿಗೆ ಹೊಡೆದಿರುತ್ತಾನೆ. ಆಗ ಫಯಾಜ್ ಕಾರಿನಿಂದ ಕತ್ತಿಯನ್ನು ಹಿಡಿದು ತೌಸಿದನ ಬಳಿಗೆ ಬಂದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕತ್ತಿಯಿಂದ ಕಡಿಯಲು ಬಂದಾಗ ಅಲ್ಲಿದ್ದವರು ತಡೆದಿರುತ್ತಾರೆ. ನಂತರ ರಹೀಂ ಸೋಡಾ ಬಾಟ್ಟಿಯನ್ನು ಅಲ್ಲೆ ಬಿಸಾಡಿ ಕತ್ತಿಯನ್ನು ಹಿಡಿದುಕೊಂಡು ಕಾರನ್ನು ಅಲ್ಲೆ ಬಿಟ್ಟು ಹೋಗಿರುತ್ತಾರೆ.
ಹಲ್ಲೆಯಿಂದ ತೌಸಿದನ ಎಡ ಕಣ್ಣಿಗೆ ಗಾಯವಾಗಿ ಕಣ್ಣು ಕಾಣದಂತಾಗಿರುತ್ತದೆ. ಈ ತೌಸಿದ್ ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2025 ಕಲಂ 352, 115(2), 118(2), 109, 351(2) ಆರ್/ಡಬ್ಲ್ಯ 3(5) ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment