ಪಾಣೇರ್ ಓಲ್ಡ್ ಬ್ರಿಡ್ಜ್ ಕೆಪಾಸಿಟಿ ಟೆಸ್ಟ್ : ಪುರಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದ ತಾಂತ್ರಿಕ ಮಹಾವಿದ್ಯಾಲಯದ ಅಧಿಕಾರಿಗಳು - Karavali Times ಪಾಣೇರ್ ಓಲ್ಡ್ ಬ್ರಿಡ್ಜ್ ಕೆಪಾಸಿಟಿ ಟೆಸ್ಟ್ : ಪುರಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದ ತಾಂತ್ರಿಕ ಮಹಾವಿದ್ಯಾಲಯದ ಅಧಿಕಾರಿಗಳು - Karavali Times

728x90

27 June 2025

ಪಾಣೇರ್ ಓಲ್ಡ್ ಬ್ರಿಡ್ಜ್ ಕೆಪಾಸಿಟಿ ಟೆಸ್ಟ್ : ಪುರಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದ ತಾಂತ್ರಿಕ ಮಹಾವಿದ್ಯಾಲಯದ ಅಧಿಕಾರಿಗಳು

ಬಂಟ್ವಾಳ, ಜೂನ್ 27, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲ್ಲಿನ ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯದ (ಎನ್ ಐ ಟಿ ಕೆ) ಅಧಿಕಾರಿಗಳು ಗುರುವಾರ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮಥ್ರ್ಯವನ್ನು ಪರಿಶೀಲನೆ ನಡೆಸಿದ್ದಾರೆ. 

ಎನ್ ಐ ಟಿ ಕೆ ಪೆÇ್ರಫೆಸರ್ ಡಾ ಪಲಿನಿ ಸ್ವಾಮಿ, ವಿಜಯನ್ ಅವರು ಸ್ಥಳಕ್ಕಾಗಮಿಸಿ, ಪುರಸಭಾಧ್ಯಕ್ಷ ವಾಸು ಪೂಜಾರಿ ಹಾಗೂ ಮುಖ್ಯಾಧಿಕಾರಿ ನಝೀರ್ ಅಹ್ಮದ್ ನೇತೃತ್ವದ ತಂಡದೊಂದಿಗೆ ಸೇತುವೆಯ ಮೇಲ್ಮೈ ಪರಿಶೀಲನೆ ನಡೆಸಿದರು. ಮುಂಗಾರು ಚುರುಕಾಗಿರುವ ಹಿನ್ನಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದ ಕಾರಣ ಸೇತುವೆಯ ಪಿಲ್ಲರ್ ಸಹಿತ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡಕ್ಕೆ ಸಾಧ್ಯವಾಗದೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಬರುವುದಾಗಿ ಪುರಸಭಾಧ್ಯಕ್ಷ, ಮುಖ್ಯಾಧಿಕಾರಿಗೆ ತಿಳಿಸಿ ವಾಪಾಸ್ಸಾಗಿದ್ದಾರೆ. 

ಶಿಥಿಲಾವಸ್ಥಗೆ ತಲುಪಿರುವ ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಈ ಹಿಂದೆಯೇ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಡೀಸಿ ಆದೇಶದ ಹಿನ್ನಲೆಯಲ್ಲಿ ಇತ್ತೀಚೆಗೆ ಪುರಸಭೇ ವತಿಯಿಂದ ಸೇತುವೆ ಮೇಲೆ ಘನ ವಾಹನ ಸಂಚಾರ ನಡೆಸದಂತೆ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಘನ ವಾಹನವೊಂದು ಈ ಕಮಾನಿಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದರಿಂದ ಸೇತುವೆ ಮೇಲೆ ಎಲ್ಲಾ ವಾಹನ ನಿಷೇಧಿಸಿ ಬಂಟ್ವಾಳ ತಹಶೀಲ್ದಾರರು ಆದೇಶ ಹೊರಡಿಸಿ ಸೇತುವೆಗೆ ಟೇಪ್ ಅಳವಡಿಸಿ ಬಂದ್ ಮಾಡಲಾಗಿತ್ತು. 

ಸೇತುವೆಯಲ್ಲಿ ಲಘು ವಾಹನ ಸಂಚಾರವನ್ನೂ ನಿಷೇಧಿಸಿದ್ದರಿಂದ ಪಾಣೆಮಂಗಳೂರು ಪೇಟೆ ಸಹಿತ, ಅಕ್ಕರಂಗಡಿ, ನಂದಾವರ, ಮೆಲ್ಕಾರ್ ಮೊದಲಾದ ಪ್ರದೇಶಗಳ ಜನ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಇಲ್ಲದೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಅವರು ಈ ಬಗ್ಗೆ ಸಂಚಾರ ನಿಷೇಧ ತೆರವು ಆದೇಶ ವಾಪಾಸು ಪಡೆದು ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪುರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಬಳಿಕ ನಿರ್ಣಯದ ಪ್ರತಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಪಾಣೆಮಂಗಳೂರು ಊರಿನ ಅಸ್ತಿತ್ವವೇ ಈ ಸೇತುವೆಯಾಗಿದ್ದು, ನಂದಾವರದ ಪ್ರಸಿದ್ದ ದೇವಸ್ಥಾನ, ದರ್ಗಾ, ಮಸೀದಿ, ಹಳೆಯ ಕಾಲದ ಶಾರದಾ ಪ್ರೌಢಶಾಲೆ ಸಹಿತ ಜನೋಪಯೋಗಿ ಸ್ಥಳಗಳಿಗೆ ಸಂಚಾರ ಮಾರ್ಗ ಇದೇ ಆಗಿರುವುದರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆದೇಶಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಸದ್ರಿ ಸೇತುವೆಯ ದುರಸ್ತಿಗೆ ಸಂಬಂಧಪಟ್ಟಂತೆ ಪುರಸಭೆಯಿಂದಾಗುವ ಎಲ್ಲ ವ್ಯವಸ್ಥೆಗಳನ್ನೂ ನಾವು ಮಾಡುತ್ತೇವೆ ಎಂದು ಕೋರಿಕೊಂಡ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ ಅವರು ಸದ್ರಿ ಸೇತುವೆಯಲ್ಲಿ ಧಾರಣೆ ಸಾಮಥ್ರ್ಯ ಪರೀಕ್ಷೆವರೆಗೂ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶ ನೀಡಿದ್ದರು. 

ಇದೀಗ ಜಿಲ್ಲಾಧಿಕಾರಿ ಸೂಚನೆಯಂತೆ ಸೇತುವೆಯ ಧಾರಣಾ ಸಾಮಥ್ರ್ಯ ಪರೀಕ್ಷೆಗೆ ಎನ್ ಐ ಟಿ ಕೆ ಅಧಿಕಾರಿಗಳ ತಂಡ ಆಗಮಿಸಿ ಪ್ರಾಥಮಿಕ ಹಂತದಲ್ಲಿ ಮೇಲ್ಮೈ ಪರೀಕ್ಷೆ ನಡೆಸಿದ್ದು, ನದಿಯಲ್ಲಿ ನೀರು ಕಡಿಮೆಯಾದ ಬಳಿಕ ಮತ್ತೊಮ್ಮೆ ಆಗಮಿಸಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆಸುವುದಾಗಿ ತಿಳಿಸಿ ತೆರಳಿದ್ದಾರೆ. ಈ ಸಂದರ್ಭ ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯಾಧಿಕಾರಿ ರತ್ನಪ್ರಸಾದ್ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೇರ್ ಓಲ್ಡ್ ಬ್ರಿಡ್ಜ್ ಕೆಪಾಸಿಟಿ ಟೆಸ್ಟ್ : ಪುರಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದ ತಾಂತ್ರಿಕ ಮಹಾವಿದ್ಯಾಲಯದ ಅಧಿಕಾರಿಗಳು Rating: 5 Reviewed By: karavali Times
Scroll to Top