ರಿಯಾದ್, ಜೂನ್ 06, 2025 (ಕರಾವಳಿ ಟೈಮ್ಸ್) : ಸೌದಿ ಅರೇಬಿಯಾದ ಪವಿತ್ರ ಮಕ್ಕಾದಲ್ಲಿ ಶುಕ್ರವಾರ (ಜೂನ್ 6) ವಿಶ್ವದ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಹಜ್ಜಾಜ್ ಗಳು ಪವಿತ್ರ ಹಜ್ ಕರ್ಮವನ್ನು ನೆರವೇರಿಸುತ್ತಿದ್ದರೆ ಇತ್ತ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದಲ್ಲಿರುವ ಪ್ರವಾಸಿ ಬಾಂಧವರು ತಮ್ಮ ತಮ್ಮ ಸ್ಥಳಗಳಲ್ಲೇ ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡರು. ಕರಾವಳಿ ಪ್ರದೇಶದ ವಿವಿಧ ಬಾಗಗಳಿಂದ ಉದ್ಯೋಗ ನಿಮಿತ್ತ ಸೌದಿಯಲ್ಲಿರುವ ಕರಾವಳಿಯ ಪ್ರವಾಸಿ ಮುಸ್ಲಿಂ ಬಾಂಧವರು ವಿವಿಧ ಮಸೀದಿಗಳಲ್ಲಿ ಈದ್ ಪ್ರಾರ್ಥನೆ ನೆರವೇರಿಸಿದ ಬಳಿಕ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡರಲ್ಲದೆ ಫೋನ್ ಮೂಲಕ ಊರಿನ ಕುಟುಂಬಿಕರು ಹಾಗೂ ಸ್ನೇಹಿತರ ಜೊತೆಯೂ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ.
5 June 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment