ಮಂಗಳೂರು, ಜುಲೈ 10, 2025 (ಕರಾವಳಿ ಟೈಮ್ಸ್) : 2025ನೇ ಸಾಲಿನಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ/ ಸಾಗಾಟ ಮಾಡುವವರ ವಿರುದ್ದ ಇದುವರೆಗೆ 40 ಪ್ರಕರಣ ದಾಖಲಿಸಿ 67 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಆರೋಪಿಗಳಿಂದ 1,36,35,650/- ರೂಪಾಯಿ ಬೆಳೆಬಾಳುವ 145 ಕೆ.ಜಿ 324 ಗ್ರಾಂ ಗಾಂಜಾ, 319.976 ಗ್ರಾಂ ಎಂ.ಡಿ.ಎಂ.ಎ, 13 ಗ್ರಾಂ ಎಂ.ಡಿ.ಎಂ.ಎ ಪಿಲ್, 756.52 ಹೈಡ್ರೋ ವೀಡ್ ಗಾಂಜಾ ಹಾಗೂ ಇತರೆ ವಿವಿಧ ಮಾದಕ ಸೊತ್ತುಗಳನ್ನು ವಶಪಡಿಸಲಾಗಿದೆ.
ದಿನಾಂಕ 15-01-2025 ರಂದು 335 ಕೆ.ಜಿ 460 ಗ್ರಾಂ ಗಾಂಜಾ, 7 ಕೆ.ಜಿ 640 ಗ್ರಾಂ ಎಂ.ಡಿ.ಎಂ.ಎ ಮತ್ತು 16 ಜಿಎಂಎಸ್ ಕೊಕೇನ್ ಮಾದಕ ವಸ್ತುಗಳನ್ನು ನಾಶ ಮಾಡಲಾಗಿತ್ತು. ಜುಲೈ 10 ರಂದು 21 ಕೆ.ಜಿ 320 ಗ್ರಾಂ ಗಾಂಜಾ ಮತ್ತು 60 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಸುಟ್ಟು ನಾಶ ಪಡಿಸಲಾಯಿತು.
ಮಂಗಳೂರು ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ/ ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಿ ಅಪರಾಧಗಳನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಈ ಕುರಿತು 2025ನೇ ಸಾಲಿನಲ್ಲಿ ಇದುವರೆಗೆ 40 ಪ್ರಕರಣ ದಾಖಲಿಸಿ 67 ಆರೋಪಿಗಳನ್ನು ದಸ್ತಗರಿ ಮಾಡಿ 1,36,35,650/- ರೂಪಾಯಿ ಮೌಲ್ಯದ 145 ಕೆ.ಜಿ 324 ಗ್ರಾಂ ಗಾಂಜಾ, 319.976 ಗ್ರಾಂ ಎಂ.ಡಿ.ಎಂ.ಎ, 13 ಗ್ರಾಂ ಎಂ.ಡಿ.ಎಂ.ಎ ಪಿಲ್ಸ್, 756.52 ಹೈಡ್ರೋ ವೀಡ್ ಗಾಂಜಾ ಹಾಗೂ ಇತರೆ ವಿವಿಧ ಮಾದಕ ಸೊತ್ತುಗಳನ್ನು ವಶಪಡಿಸಲಾಗಿದೆ. ಅದೇ ರೀತಿ ಮಾದಕ ವಸ್ತು ಸೇವನೆಯ ಕುರಿತು 2025ನೇ ಸಾಲಿನಲ್ಲಿ 376 ಜನರ ಮೇಲೆ 335 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಾದಕ ಸೊತ್ತುಗಳನ್ನು ಈ ಹಿಂದೆ ದಿನಾಂಕ 15-01-2025 ರಂದು ಮಾದಕ ವಸ್ತುಗಳ ನಾಶ ಮಾಡುವ ಕಾರ್ಯಕ್ರಮವನ್ನು ಕೈಗೊಂಡು ಒಟ್ಟು 6,80,86,558/- ರೂಪಾಯಿ ಮೌಲ್ಯದ 335 ಕೆ.ಜಿ 460 ಗ್ರಾಂ ಗಾಂಜಾ, 7 ಕೆ.ಜಿ 640 ಗ್ರಾಂ ಎಂ.ಡಿ.ಎಂ.ಎ ಮತ್ತು 16 ಜಿಎಂಎಸ್ ಕೊಕೇನ್ ಮಾದಕ ವಸ್ತುಗಳನ್ನು ಈಗಾಗಲೇ ನಾಶ ಮಾಡಿ ವಿಲೇವಾರಿ ಮಾಡಲಾಗಿರುತ್ತದೆ.
ಇಂದು (ಜುಲೈ 10) ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೊಲ್ನಾಡು ಇಂಡಸ್ಟ್ರೀಯಲ್ ಪ್ರದೇಶದಲ್ಲಿರುವ ರಿ ಸಸ್ಟ್ಟೈನ್ಯಾಬಿಲಿಟಿ ಹೆಲ್ತ್ ಕೇರ್ ಸೊಲ್ಯುಷನ್ ಲಿ. ಎಂಬಲ್ಲಿ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಮಾಡುವ ಕಾರ್ಯಕ್ರಮ ನಡೆಸಿದ್ದು, ಈ ಸಂದರ್ಭ ನ್ಯಾಯಾಲಯದ ಅನುಮತಿ ಪಡೆದು ಮಂಗಳೂರು ನಗರ ವ್ಯಾಪ್ತಿಯ 9 ಠಾಣೆಗಳ ಒಟ್ಟು 23 ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 21 ಕೆ.ಜಿ 320 ಗ್ರಾಂ ಗಾಂಜಾ ಮತ್ತು 60 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಯಿತು ಎಂದು ಕಮಿಷನರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment