ಸುಳ್ಯ, ಜುಲೈ 10, 2025 (ಕರಾವಳಿ ಟೈಮ್ಸ್) : ಜ್ವರ ಹಾಗೂ ಕೆಮ್ಮಿನ ಕಾರಣದಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಡೆಕೋಲು ಗ್ರಾಮದ ಬೊಳ್ಳುಗಲ್ಲು ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಮಹಿಳೆಯನ್ನು ಸುಳ್ಯ ಕಸಬಾ ಗ್ರಾಮದ ಜಯನಗರ ಎಂಬಲ್ಲಿನ ನಿವಾಸಿ, ದಿನಸಿ ಅಂಗಡಿ ಮಾಲಕ ಸುರೇಶ್ ಕಾಮತ್ ಅವರ ಪತ್ನಿ ಸುಭಾಷಿಣಿ (38) ಎಂದು ಹೆಸರಿಸಲಾಗಿದೆ. ಇವರಿಗೆ 5 ದಿನಗಳ ಹಿಂದೆ ಜ್ವರ ಮತ್ತು ಕೆಮ್ಮು ಆರಂಭವಾಗಿದ್ದು, ಇವರ ತಾಯಿ ಪದ್ಮಾವತಿ ಅವರು ಬಂದು ಜುಲೈ 7 ರಂದು ತವರು ಮನೆಯಾದ ಮಂಡೆಕೋಲು ಗ್ರಾಮದ ಬೊಳ್ಳುಗಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಬುಧವಾರ ಬೆಳಿಗ್ಗೆ 5 ಗಂಟೆಗೆ ಸುಭಾಷಿಣಿ ಜ್ವರದ ತೀವ್ರತೆಯಿಂದ ನಿತ್ರಾಣಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುರೇಶ್ ಕಾಮತ್ ನೀಡಿದ ದೂರಿನಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment