ಬಂಟ್ವಾಳ, ಜುಲೈ 10, 2025 (ಕರಾವಳಿ ಟೈಮ್ಸ್) : ಇಲ್ಲಿನ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 139/2007 ಕಲಂ 366, 420, 120ಬಿ, 368 ಜೊತೆಗೆ 149 ಐಪಿಸಿ ಪ್ರಕರಣದ ಆರೋಪಿಯಾಗಿ 2023 ರ ಡಿಸೆಂಬರ್ ತಿಂಗಳಿನಿಂದ ನ್ಯಾಯಾಲಯ್ಕಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಚಿ ನಿವಾಸಿ ಹಿದಾಯತ್ ಅಲಿಯಾಸ್ ಅಬ್ದುಲ್ಲ ಎಂಬಾತನನ್ನು ಗುರುವಾರ ಕೇರಳದ ಮಂಜೇಶ್ವರದಲ್ಲಿ ಬಂಟ್ವಾಳ ನಗರ ಪೊಲೀಸರು ಬಂದಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ರಿ ಆರೋಪಿಯು ಜಾಮೀನು ಬಿಡುಗಡೆಗೊಂಡು ಬಳಿಕ ನ್ಯಾಯಾಲಯದ ಅದೇಶ ಉಲ್ಲಂಘಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಆತನ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಗುರುವಾರ ಅಪರಾಧ ಕ್ರಮಾಂಕ 74/2025 ಕಲಂ 269 ಬಿಎನ್‍ಎಸ್ ಪ್ರಕಾರ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment