ಉಪ್ಪಿನಂಗಡಿ, ಜುಲೈ 16, 2025 (ಕರಾವಳಿ ಟೈಮ್ಸ್) : ಪೆರ್ನೆ ಎ ಎಂ ಆಡಿಟೋರಿಯಂ ಬಳಿ ನಿಲ್ಲಿಸಿದ್ದ ಅಟೋ ರಿಕ್ಷಾ ಕಾಣೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಪೆರ್ನೆ ನಿವಾಸಿ ಅಶ್ರಫ್ ಪಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಇವರ ಸಹೋದರಿಯ ಪುತ್ರ ತೌಫಿಕ್ ಎಂಬಾತನ ಮಾಲಕತ್ವದ ಕೆಎ21 ಸಿ6416 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದ ಸಾಲದ ಕಂತನ್ನು ತೌಫಿಕನ ಒಪ್ಪಿಗೆಯಂತೆ ಬ್ಯಾಂಕಿಗೆ ಮರು ಪಾವತಿ ಮಾಡಿ ಸುಮಾರು 20 ದಿನಗಳಿಂದ ಸದ್ರಿ ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡಿದ್ದರು.
ಜುಲೈ 13 ರಂದು ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿ ರಾತ್ರಿ 11.30ಕ್ಕೆ ಸುಲೈಮಾನ್ ಎಂಬವರ ಮನೆಯ ಎದುರುಗಡೆ ಪೆರ್ನೆ ಎ ಎಂ ಅಡಿಟೋರಿಯಂ ಬಳಿ ಲಾಕ್ ಮಾಡಿ ನಿಲ್ಲಿಸಿದ್ದರು. ಮರುದಿನ ಅಂದರೆ ಜುಲೈ 14 ರಂದು ಮುಂಜಾನೆ 4 ಗಂಟೆಗೆ ಅಶ್ರಫ್ ಅವರು ಮಸೀದಿಗೆ ಹೋಗಲು ಆಟೋ ರಿಕ್ಷಾದ ಬಳಿಗೆ ತೆರಳಿ ನೋಡಿದಾಗ ಆಟೋ ರಿಕ್ಷಾ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಕಾಣೆಯಾಗಿರುತ್ತದೆ.
ಸದ್ರಿ ಆಟೋ ರಿಕ್ಷಾವನ್ನು ಜುಲೈ 13 ರ ರಾತ್ರಿ 11.30ರಿಂದ ಮರುದಿನ ಮುಂಜಾನೆ 4 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಕಳವಾಗಿರುವ ಅಟೋ ರಿಕ್ಷಾದ ಮೌಲ್ಯ 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಶ್ರಫ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment