ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್ ಐ ಟಿ ಕೆ) ಇದರ ಅಧಿಕಾರಿಗಳು ಜೂನ್ 26 ರಂದು ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮಥ್ರ್ಯವನ್ನು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಜುಲೈ 3 ರಂದು ತಾತ್ಕಾಲಿಕ ವರದಿ ನೀಡಿದ್ದಾರೆ.
ಧಾರಣಾ ಸಾಮಥ್ರ್ಯ ಪರೀಕ್ಷೆ ನಡೆಸಿದ್ದ ಎನ್ ಐ ಟಿ ಕೆ ಪೆÇ್ರಫೆಸರ್ ಗಳಾದ ಡಾ ಜೆ ವಿಜಯ ವೆಂಕಡೇಶ್ ಕುಮಾರ್ ಹಾಗೂ ಡಾ ಟಿ ಪಲಿನಿಸಾಮಿ ಅವರು ಸೇತುವೆಯ ಪಿಲ್ಲರ್ ಗಳ ಪರೀಕ್ಷೆಯನ್ನು ನದಿಯಲ್ಲಿ ನೀರು ಕಡಿಮೆಯಾದ ಬಳಿಕ ಇನ್ನೊಮ್ಮೆ ನಡೆಸಬೇಕಾಗಿದ್ದು, ಅಲ್ಲಿವರೆಗೆ ಕೇವಲ ಲಘು ವಾಹನಗಳು ಮಾತ್ರ ಸಂಚರಿಸಬಹುದು ಎಂದು ವರದಿ ನೀಡಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಬಿ ವಾಸು ಪೂಜಾರಿ ಲೊರೆಟ್ಟೊ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭಾಧ್ಯಕ್ಷ ವಾಸು ಪೂಜಾರಿ ಅವರು, ಶಿಥಿಲ ಸೇತುವೆಯ ಸುರಕ್ಷತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರನ್ನು ಸೇರಿಸಿಕೊಂಡು ಸೇತುವೆ ಬೇಕಾದ ದುರಸ್ತಿ ಕಾರ್ಯಗಳನ್ನು ಮಾಡಲು ಸೂಕ್ತ ನಿರ್ಣಯ ಕೈಗೊಂಡು ದುರಸ್ತಿ ಕಾರ್ಯ ನಡೆಸಲಾಗುವುದು ಎಂದಿದ್ದಾರೆ.
ಸಾರ್ವಜನಿಕರ ಆಗ್ರಹ
ಬ್ರಿಟಿಷರ ಕಾಲದಲ್ಲಿ ಸುಮಾರು 111 ವರ್ಷಗಳ ಹಿಂದೆ ಇಂಗ್ಲಂಡಿನಿಂದಲೇ ಕಬ್ಬಿಣ ಸಹಿತ ಕಚ್ಚಾ ಸಾಮಾಗ್ರಿಗಳನ್ನು ತಂದು ಪಾಣೆಮಂಗಳೂರಿನಲ್ಲಿ ನಿರ್ಮಿಸಿದ ಸೇತುವೆಯ ಕಬ್ಬಿಣ ಸಹಿತ ಸಾಮಾಗ್ರಿಗಳು ಇನ್ನೂ ಕೂಡಾ ಗಟ್ಟಿಮುಟ್ಟಾಗಿದ್ದು, 200 ವರ್ಷ ಕಳೆದರೂ ಯಾವುದೇ ರೀತಿಯಲ್ಲಿ ಕುಂದುಂಟಾಗದ ರೀತಿಯಲ್ಲಿದೆ. ಪುರಸಭೆ ಅಥವಾ ರಾಜ್ಯ ಸರಕಾರದಿಂದ ಸೂಕ್ತ ದುರಸ್ತಿ ಕಾರ್ಯ ಕೈಗೊಂಡಲ್ಲಿ ಬ್ರಿಟಿಷರ ಕಾಲದ ಹಳೆಯ ಸೇತುವೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬರಹುದು. ಈ ಕೆಲಸವನ್ನು ಪುರಸಭಾಧ್ಯಕ್ಷ ವಾಸು ಪೂಜಾರಿ ಅವರ ನೇತೃತ್ವದ ಪುರಸಭಾಡಳಿತ ನಿರ್ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment