ಬಂಟ್ವಾಳ, ಜುಲೈ 15, 2025 (ಕರಾವಳಿ ಟೈಮ್ಸ್) : ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಪೇಜಿನಲ್ಲಿ ವಕೀಲ ಸಮುದಾಯದ ಘನತೆಗೆ ಕುಂದು ಉಂಟು ಮಾಡುವ ಕೀಳು ಮಟ್ಟದ ಶಬ್ದಗಳೊಂದಿಗೆ ಸಂಭೋದಿಸಿರುವ ಬಗ್ಗೆ ವ್ಯಕ್ತಿಯೋರ್ವರ ಬಗ್ಗೆ ವಕೀಲರೋರ್ವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಮಂಗಳಪದವು ನಿವಾಸಿ, ವಕೀಲರಾಗಿರುವ ಶಿವಾನಂದ ಎಂ ವಿ (34) ಅವರು ಈ ಬಗ್ಗೆ ದೂರು ನೀಡಿದ್ದು, ಇವರು ಜೂನ್ 24 ರಂದು ತಮ್ಮ ಫೇಸ್ ಬುಕ್ ಖಾತೆಯನ್ನು ಪರಿಶೀಲಿಸುತ್ತಿದ್ದಾಗ ಆರೋಪಿ ನವೀನ್ ಗೌಡ ಎಂಬಾತನು ತನ್ನ ಫೇಸ್ ಬುಕ್ ಖಾತೆಯಲ್ಲಿ ವಕೀಲ ಸಮುದಾಯದ ಘನತೆಗೆ ಕುಂದು ಉಂಟು ಮಾಡುವಂತಹ ಕೀಳು ಮಟ್ಟದ ಶಬ್ದಗಳೊಂದಿಗೆ ಸಂಭೋದಿಸಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025 ಕಲಂ 351(2), 352, 353 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣ ಮುಂದುವರಿದಂತೆ, ಜೂನ್ 26 ರಂದು ವಕೀಲ ಶಿವಾನಂದ ಅವರು ನೀಡಿದ ದೂರಿನ ವರದಿಯು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಸದ್ರಿ ವರದಿನ್ನು ಉಲ್ಲಖಿಸಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಪೇಜಿನಲ್ಲಿ ನವೀನ್ ಗೌಡ ಎಂಬ ಖಾತೆಯಲ್ಲಿ ಆರೋಪಿಯು ವಕೀಲರ ಮೇಲೆ ನಿಂದನ್ಮಾತಕ ಪದಗಳನ್ನು ಬಳಸಿ ಮಾನಹಾನಿ ಉಂಟುಮಾಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 77/2025 ಕಲಂ 351(2), 352, 353 ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment