ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಮೂವರ ತಂಡ ಹಿಟಾಚಿ ಬಳಸಿ ಗಿಡ-ಮರಗಳನ್ನು ನಾಶ ಮಾಡಿರುವ ಬಗ್ಗೆ ವ್ಯಕ್ತಿಯೋರ್ವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೀರಕಂಭ ಗ್ರಾಮದ ನೆಕ್ಕರಾಜೆ ನಿವಾಸಿ ಉಮಾಕರ ಎನ್ (45) ಅವರು ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರು ಬಡಗಕಜೆಕಾರು ಗ್ರಾಮದ ಸರ್ವೆ ನಂಬ್ರ 114/1 ರಲ್ಲಿ 1.70 ಎಕ್ರೆ ಜಮೀನಿನಲ್ಲಿ ಕೃಷಿ-ಕೃತಾವಳಿ ಮಾಡಿಕೊಂಡು ಬರುತ್ತಿದ್ದು ಸದ್ರಿ ಜಮೀನು ಅವರ ಸ್ವಾಧೀನದಲ್ಲಿರುತ್ತದೆ. ಜುಲೈ 30 ರಂದು ಮಧ್ಯಾಹ್ನ 1.30ಕ್ಕೆ ಉಮಾಕರ ಅವರು ತನ್ನ ತೋಟಕ್ಕೆ ಹೋದಾಗ ಆರೋಪಿಗಳಾದ ಕವಿತಾ, ಬಾಲಕೃಷ್ಣ ಪೂಜಾರಿ ಹಾಗೂ ಮನ್ವಿತಾ ಅವರುಗಳು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಹಿಟಾಚಿ ಬಳಸಿ ತೋಟದ ಅಗಲನ್ನು ತೆಗೆದು ಹಾಕಿ ಅಲ್ಲಿ ಬೆಳೆಸಲಾಗಿದ್ದ 30 ರಕ್ತ ಚಂದನ ಸಸಿಗಳನ್ನು ಹಾಗೂ 8 ತೆಂಗಿನ ಸಸಿಗಳನ್ನು ನಾಶ ಮಾಡಿರುತ್ತಾರೆ. ಆರೋಪಿಗಳ ಕೃತ್ಯದಿಂದ ಸುಮಾರು 50 ಸಾವಿರ ರೂಪಾಯಿ ನಷ್ಟವುಂಟಾಗಿದೆ ಎಂದು ಉಮಾಕರ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
0 comments:
Post a Comment