ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ನಾಗರ ಪಂಚಮಿ ದಿನದಂದು ಮೂಲ ಮನೆಗೆಂದು ತೆರಳಿದ ವೃದ್ದೆಯೋರ್ವರು ವಾಪಾಸು ಮನೆಗೆ ಬಾರದೆ ಮೂಲ ಮನೆಗೂ ಹೋಗದೆ ಕಾಣೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವೃದ್ದೆಯನ್ನು ಸರಸ್ವತಿ (65) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಸಹೋದರಿಯ ಪುತ್ರ ಅಭೀಷೇಕ್ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ದೊಡ್ಡಮ್ಮ ಸರಸ್ವತಿ ಅವರು ಜುಲೈ 29 ರಂದು ಬೆಳಿಗ್ಗೆ 8.45ಕ್ಕೆ ಮನೆಯಿಂದ ನಾಗರ ಪಂಚಮಿ ಪ್ರಯುಕ್ತ ಅವರ ಮೂಲ ಮನೆಯಾದ ಪಂಜಾಜೆ ಮಹಾಬಲೇಶ್ವರ ಭಟ್, ಗೊವಿಂದ ಭಟ್ ಅವರ ಮನೆಗೆಂದು ಹೋದವರು ವಾಪಾಸ್ಸು ಮನೆಗೆ ಸಂಜೆಯಾದರೂ ಬಾರದೇ ಇದ್ದಾಗ, ಪಂಜಾಜೆ ಮಹಾಬಲೇಶ್ವರ ಭಟ್, ಗೊವಿಂದ ಭಟ್ ಅವರನ್ನು ವಿಚಾರಿಸಿದಾಗ ಅವರ ಮನೆಗೆ ಬಂದಿರುವುದಿಲ್ಲವಾಗಿ ತಿಳಿದು ಬಂದಿದೆ. ಇವರು ಈಶ್ವರ ಭಟ್ ಅವರ ಮನೆಯ ಬಳಿ ದಾರಿ ತಪ್ಪಿ ಹೋಗಿರುವ ಸಾದ್ಯತೆ ಇದ್ದು, ಈ ಬಗ್ಗೆ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಸರಸ್ವತಿ ಅವರು ಪತ್ತೆಯಾಗಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment