ಪುತ್ತೂರು, ಜುಲೈ 28, 2025 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜುಲೈ 5ರಂದು ದಾಖಲಾಗಿದ್ದ ಅಪರಾಧ ಕ್ರಮಾಂಕ 54/2025 ಪ್ರಕರಣದ ಆರೋಪಿಗಳು, ಸದ್ರಿ ಪ್ರಕರಣದ ಅಪ್ರಾಪ್ತ ಪ್ರಾಯದ ಬಾಲಕ ಹಾಗೂ ಆತನ ಜೊತೆಗಿದ್ದ ಅಪ್ರಾಪ್ತ ಪ್ರಾಯದ ಬಾಲಕಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುತ್ತಾರೆ.
ಸದ್ರಿ ಅಪ್ರಾಪ್ತ ವಯಸ್ಕರ ವಿಡಿಯೋವನ್ನು ಮಾದ್ಯಮಗಳಲ್ಲಿ ಹರಿಯ ಬಿಡಬಾರದೆಂದು ನಿರ್ಬಂಧ ಇದ್ದರೂ ಕೂಡ ಕೆಲವು ಅಪರಿಚಿತ ವ್ಯಕ್ತಿಗಳು, ಅಪರಿಚಿತ ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಪ್ರಕರಣದ ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಜುಲೈ 28ರಂದು ದ.ಕ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2025 ಕಲಂ 74 ಜೆಜೆ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment