ಮಂಗಳೂರು, ಜುಲೈ 11, 2025 (ಕರಾವಳಿ ಟೈಮ್ಸ್) : ಜುಲೈ 2 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಬೀದರ್ ಜಿಲ್ಲೆಯ ಮಂಗಲಪೇಟ್ ನಿವಾಸಿ, ಪ್ರಸ್ತುತ ಬೆಂಗಳೂರು, ಕೆಂಗೇರಿ-ಕೋಡಿಪಾಳ್ಯದಲ್ಲಿ ವಾಸವಾಗಿರುವ ಸ್ಯಾಮುವೆಲ್ ಎಂಬವರ ಪುತ್ರ ಪ್ರಜ್ವಲ್ ಪೀಣ್ಯಾಸ್ ಎಂದು ಹೆಸರಿಸಲಾಗಿದೆ.
ಬಂಧಿತ ವ್ಯಕ್ತಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತು ಪಡೆದುಕೊಂಡು ಮಂಗಳೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದವರ ಪೈಕಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಆರೋ¥ಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೆÇೀನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯು ಈ ಹಿಂದೆ ಮಂಗಳೂರು ನಗರದ ಫಾದರ್ ಮುಲ್ಲರ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು, ಈತನ ವಿರುದ್ಧ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ 3 ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಬಂಧನದೊಂದಿಗೆ ಮಾದಕ ವಸ್ತು ಸರಣಿಯಲ್ಲಿ ಬಂಧಿತರ ಸಂಖ್ಯೆ 10ಕ್ಕೇರಿದಂತಾಗಿದೆ.
ಸದ್ರಿ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡುವವರಿಂದ ತನಿಖೆ ಆರಂಭಿಸಿದ ಪೊಲೀಸರು ಹಂತ ಹಂತವಾಗಿ ಮಾದಕ ವಸ್ತಗಳನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ 9 ಜನರನ್ನು ಪತ್ತೆ ಮಾಡಿ ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು-ಬಿಕರ್ನಕಟ್ಟೆ ಸಮೀಪದ ಅಡು ಮರೋಳಿ ನಿವಾಸಿ ರಾಜೇಶ್ ತಾರನಾಥ್ ಅವರ ಪುತ್ರ ತುಷಾರ್ ಅಲಿಯಾಸ್ ಸೋನು (21), ನಾಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಅವರ ಪುತ್ರ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆ ನಿವಾಸಿ ಶೀತಲ್ ಕುಮಾರ್ ಅವರ ಪುತ್ರ ಸಾಗರ್ ಕರ್ಕೇರಾ (19), ಶಕ್ತಿನಗರ ನಿವಾಸಿ ರಾಜು ಥಾಪ ಅವರ ಪುತ್ರ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23), ಅಳಕೆ-ಕಂಡೆಟ್ಟು ನಿವಾಸಿ ದಿವಂಗತ ಹರೀಶ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (24), ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿವಾಸಿ ದಿವಾಕರ ಶೆಟ್ಟಿ ಅವರ ಪುತ್ರ ಧ್ರುವ್ ಡಿ ಶೆಟ್ಟಿ (22), ಮಧ್ಯಪ್ರದೇಶ ರಾಜ್ಯದ ಬರ್ವಾನಿ ಜಿಲ್ಲೆಯ, ಮೋಹನ್ ಪಡವಾ ಗ್ರಾಮದ ನಿವಾಸಿ ಕಲಿಯಾ ಎಂಬವರ ಮಗ ಮಾಯಾರಾಮ್ (32), ಮಹಾರಾಷ್ಟ್ರ ರಾಜ್ಯದ ಜಲಂಗಾವ್ ಜಿಲ್ಲೆಯ ಚೋಪ್ಡಾ ನಿವಾಸಿ ರಾಮ ಪವಾರ ಎಂಬವರ ಪುತ್ರ ಪ್ರೇಮಸಿಂಗ್ ರಾಮ ಪವಾರ (48) ಹಾಗೂ ಅದೇ ಗ್ರಾಮದ ನಿವಾಸಿ ಪ್ರಕಾಶ ನಾರಾಯಣ ಎಂಬವರ ಮಗ ಅನಿಲ್ ಪ್ರಕಾಶ್ ಕೋಲಿ (35) ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
0 comments:
Post a Comment