ಬೆಳ್ತಂಗಡಿ, ಜುಲೈ 11, 2025 (ಕರಾವಳಿ ಟೈಮ್ಸ್) : ದಿನಸಿ ಅಂಗಡಿಯಲ್ಲಿ ಸಾಮಾನು ಖರೀದಿಸಿದ ದುಡ್ಡು ಕೇಳಿದ್ದಕ್ಕೆ ಆರೋಪಿ ಅಂಗಡಿಗೇ ಬೆಂಕಿ ಹಚ್ಚಿದ ಘಟನೆ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಆರೋಪಿಯನ್ನು ಬಳಂಜ ಗ್ರಾಮದ ನಿವಾಸಿ ಉಮೇಶ್ ಬಂಗೇರ ಎಂದು ಹೆಸರಿಸಲಾಗಿದೆ. ಕುವೆಟ್ಟು ಗ್ರಾಮದ ನಿವಾಸಿ ಸದಕತುಲ್ಲ (50) ಎಂಬವರು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಬುಧವಾರ ರಾತ್ರಿ (ಜುಲೈ 9) ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗುರುವಾರ ಬೆಳಿಗ್ಗಿನ ಸಮಯ ಆರೋಪಿ ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸದಕತುಲ್ಲಾ ಅವರು ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ.
ಆರೋಪಿಯ ಕೃತ್ಯದಿಂದ ಅಂಗಡಿಗೆ ಅಳವಡಿಸಿದ 2 ಫ್ಲೆಕ್ಸ್ ಸುಟ್ಟು ಹೋಗಿ, 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿದೆ. ಆರೋಪಿಯು ಅಂಗಡಿಯಿಂದ ಖರೀದಿಸಿದ ಸಾಮಾನಿನ ದುಡ್ಡು ಬಾಕಿ ಇರಿಸಿದ್ದು, ಅದನ್ನು ಸದಕತುಲ್ಲಾ ಕೇಳಿರುವುದಕ್ಕಾಗಿ ಕೋಪಗೊಂಡು ಈ ಕೃತ್ಯವನ್ನು ಎಸಗಿರುತ್ತಾರೆ ಎಂದು ದೂರಲಾಗಿದೆ. ಘಟನೆಯಿಂದ ಅಂಗಡಿ ಮಾಲಕನಿಗೆ ಸುಮಾರು 3 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ ಸದಕತುಲ್ಲಾ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
0 comments:
Post a Comment