ಬಂಟ್ವಾಳ, ಜುಲೈ 23, 2025 (ಕರಾವಳಿ ಟೈಮ್ಸ್) : ನಗೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಆಸ್ಪತ್ರೆಯಲ್ಲಿ ಡಾಕ್ಟರ್‍ಗಳು ರೋಗಿಗಳಿಗೆ ಯಾವಾಗಲೂ ನಗುನಗುತಾ ಇರಿ ಆಯುಷ್ಯ ಜಾಸ್ತಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ತುಳು ನಾಟಕರಂಗ ಮತ್ತು ಸಿನಿಮಾಗಳಲ್ಲಿ ಹಾಸ್ಯ ಇದ್ದರೆ ಮಾತ್ರ ಅಂತಹ ಸಿನಿಮಾವನ್ನು ಸಿನಿಪ್ರೇಕ್ಷಕರು ಅಪೇಕ್ಷಿಸುತ್ತಾರೆ. ಆದ್ದರಿಂದಲೇ ಬದುಕಿನ ಈ ಜಂಜಾಟಕ್ಕೆ ನಗೆಕೂಟ ಅನಿವಾರ್ಯವಾಗಿದೆ ಎಂದು ಚಲನಚಿತ್ರನಟ, ಚಾಪರ್ಕ ತಂಡ ಕಲಾವಿದ ಸುರೇಶ್ ಕುಲಾಲ್ ಬಿ ಸಿ ರೋಡು ಹೇಳಿದರು.
ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ನಡೆದ ‘ಹ... ಹ... ಹ.. ನಗೆ ಕೂಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಅವರು ಮಾತನಾಡಿ, ಈಗಿನ ಕಾಲಕ್ಕೆ ನಗೆಯೂ ಮನುಷ್ಯನ ನೆಮ್ಮದಿಯ ಜೀವನದ ಒಂದು ಭಾಗವಾಗಿದೆ. ನಗೆಯಿಂದಲೇ ಎಷ್ಟೋ ರೋಗಗಳು ದೂರವಾಗುತ್ತದೆ. ಅದಕ್ಕಾಗಿ ಬಂಟ್ವಾಳ ಕುಲಾಲ ಸಂಘದ ವತಿಯಿಂದ ಕುಲಾಲ ಭವನದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ ನಗೆಕೂಟದಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಎಲ್ಲರೂ ಇದರ ಪ್ರಯೋಜನ ಪಡೆಯುವಂತಾಗಲಿ ಎಂದರು.
ಯೋಗ ಶಿಕ್ಷಕ ಕಿಶೋರ್ ಕೈಕುಂಜೆ ನಗುವಿನಿಂದಾಗುವ ಲಾಭಗಳ ಬಗ್ಗೆ ಮಾಹಿತಿ ನೀಡಿ ಯೋಗದಲ್ಲಿರುವ ನಗೆಯ ವಿಧಾನ, ಯೋಗ ನಡಿಗೆಯ ಬಗ್ಗೆ ತರಬೇತಿ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್, ಜೊತೆ ಕಾರ್ಯದರ್ಶಿ ಸತೀಶ್ ಸಂಪಾಜೆ, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು, ಕುಲಾಲ ಸೇವಾದಳದ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು ಭಾಗವಹಿಸಿದ್ದರು.
0 comments:
Post a Comment