ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಬೋಳಂತೂರು ಗ್ರಾಮದ ನಾರಂಕೋಡಿ ಎಂಬಲ್ಲಿ ಜುಲೈ 28 ರಂದು ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ಸುರಿಬೈಲು ನಿವಾಸಿಗಳಾದ ಮಹಮ್ಮದ್ ಫರಾಹತ್ ಸುಹಾನ್ ಹಾಗೂ ಸಿದ್ದೀಕ್ ಎಸ್ ಎಚ್ ಎಂದು ಹೆಸರಿಸಲಾಗಿದೆ. ಇವರು ಸ್ಕೂಟರಿನಲ್ಲಿ ಬೋಳಂತೂರು-ಕಲ್ಲಡ್ಕ ರಸ್ತೆಯಲ್ಲಿ ಸುರಿಬೈಲು ಕಡೆಯಿಂದ ಕಲ್ಲಡ್ಕ ಕಡೆಗೆ ಸಂಚರಿಸುತ್ತಿದ್ದ ವೇಳೆ ಬೋಳಂತೂರು ಗ್ರಾಮದ ನಾರಂಕೋಡಿ ಎಂಬಲ್ಲಿ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಹಿಂಬದಿ ಸವಾರ ಫರಾಹತ್ ಸುಹಾನ್ ರಸ್ತೆಗೆಸೆಯಲ್ಪಟ್ಟರೆ, ಸವಾರ ಸಿದ್ದೀಕ್ ಅವರು ಸ್ವಲ್ಪ ಮುಂದೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಕೊಲಾಸೊ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸಹಸವಾರ ಮಹಮ್ಮದ್ ಫರಾಹತ್ ಸುಹಾನ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment