ಬಂಟ್ವಾಳ, ಜುಲೈ 11, 2025 (ಕರಾವಳಿ ಟೈಮ್ಸ್) : ವೃದ್ದ ವ್ಯಕ್ತಿಯೋರ್ವರು ಮನೆಯಿಂದ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರನ್ನು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ರಾಮನಗರ ನಿವಾಸಿ ರಮೇಶ್ ಪೈ (72) ಎಂದು ಹೆಸರಿಸಲಾಗಿದೆ. ಇವರು ಮನೆಯಲ್ಲಿ ವಯಸ್ಸಾದ ತನ್ನ ತಾಯಿಯೊಂದಿಗೆ ವಾಸವಾಗಿದ್ದಾರೆ. ಇವರ ಹೆಂಡತಿ ಮಕ್ಕಳು ಉಜಿರೆಯಲ್ಲಿ ವಾಸವಾಗಿದ್ದು, ತಿಂಗಳಿಗೊಮ್ಮೆ ಕಲ್ಲಡ್ಕಕ್ಕೆ ಬಂದು ಇವರನ್ನು ಹಾಗೂ ಇವರ ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದರು.
ಇವರ ಸಹೋದರ ಬೆಂಗಳೂರಿನಲ್ಲಿ ವಾಸವಾಗಿರುವ ಎಚ್ ಉಮೇಶ್ ಪೈ ಅವರು ತಾಯಿ ಸರಿಯಾಗಿ ಊಟ ಮಾಡುತ್ತಿಲ್ಲ ನೀನು ಬಾ ಎಂದು ಕರೆದ ಹಿನ್ನಲೆಯಲ್ಲಿ ತಮ್ಮ ಉಮೇಶ್ ಪೈ ಅವರು ಜುಲೈ 8 ರಂದು ಬೆಳಿಗ್ಗೆ ಕಲ್ಲಡ್ಕಕ್ಕೆ ಬಂದಿದ್ದಾರೆ. ಅಮ್ಮ ಮತ್ತು ಅಣ್ಣನನ್ನು ನೋಡಿಕೊಂಡು ಮದ್ಯಾಹ್ನ 12.30 ಗಂಟೆಗೆ ಕಲ್ಲಡ್ಕ ಲಕ್ಷ್ಮೀ ಹೋಟೆಲಿಗೆ ತೆರಳಿ ಊಟ ಮುಗಿಸಿ ಮದ್ಯಾಹ್ನ 1.30 ರ ವೇಳೆಗೆ ವಾಪಾಸು ಮನೆಗೆ ಬಂದು ನೋಡಿದಾಗ ರಮೇಶ್ ಪೈ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ನೆರೆಹೊರೆ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಪತ್ತೆಯಾಗದೇ ಇರುವ ಹಿನ್ನಲೆಯಲ್ಲಿ ಈ ಬಗ್ಗೆ ಉಮೇಶ್ ಪೈ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment