ಬಂಟ್ವಾಳ , ಜುಲೈ 04, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದೆ.
ಅಳಿಕೆ ನಿವಾಸಿ ಸರೋಜಿನಿ ಕೋಂ ಕೊಗ್ಗು ಬೆಳ್ಚಡ ಅವರ ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ. ಇಡ್ಕಿದು ಗ್ರಾಮದ ವಡ್ಯರ್ಪೆ ನಿವಾಸಿ ನೆಬಿಸ ಕೋಂ ಇಬ್ರಾಹಿಂ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ. ತೆಂಕಬೆಳ್ಳೂರು ಗ್ರಾಮದ ನಿವಾಸಿ ಕುಸುಮ ಕೋಂ ಕೃಷ್ಣಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಯ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟು ಹಾನಿ ಸಂಭವಿಸಿದೆ.
ವಿಟ್ಲ ಕಸಬಾ ಗ್ರಾಮದ ಕೊಳಂಬೆ ನಿವಾಸಿ ಬೀಫಾತಿಮ ಕೋಂ ಮಮ್ಮುಂಞÂ ಅವರ ಮನೆಯ ಹಂಚು ಛಾವಣಿಗೆ ಹಾನಿಯಾಗಿದೆ. ಚಂದಳಿಕೆ ಜನತಾ ಕಾಲೊನಿ ನಿವಾಸಿ ಗೀತ ಕೋಂ ಕಾಂತಪ್ಪ ಪೂಜಾರಿ ಅವರ ಮನೆಯ ಹಿಂಬದಿ ತಡೆಗೋಡೆ ಕುಸಿದು ಬಿದ್ದು, ಕೆಳಭಾಗದಲ್ಲಿರುವ ಸೀತ ಎಂಬವರ ಮನೆಯ ಸಿಮೆಂಟ್ ಶೀಟುಗಳು ಹಾನಿಯಾಗಿರುತ್ತದೆ. ಏಮಾಜೆ ಭಜನಾ ಮಂದಿರ ಬಳಿ ನಿವಾಸಿ ದೇವಪ್ಪ ಬಿನ್ ದಿವಂಗತ ತನಿಯಪ್ಪ ನಲ್ಕೆ ಅವರ ಮನೆಯ ಬದಿಗೆ ತೆಂಗಿನ ಮರ ಬಿದ್ದಿರುತ್ತದೆ.
0 comments:
Post a Comment