ಬಂಟ್ವಾಳ, ಆಗಸ್ಟ್ 30, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃಧಿಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ದಾಖಲೆಯ 1158.43 ಕೋಟಿ ವ್ಯವಹಾರ ನಡೆಸಿ 5.04 ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳವು 259.66 ಕೋಟಿ ಆಗಿರುತ್ತದೆ ಮತ್ತು ಆಡಿಟ್ ವರ್ಗಿಕರಣದಲ್ಲಿ ಸತತ ‘ಎ’ ಶ್ರೇಣಿಯನ್ನು ಪಡೆದಿರುತ್ತದೆ. ಸಂಘವು ಸಾಧಿಸಿದ ಈ ಎಲ್ಲಾ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಸತತ ನಾಲ್ಕನೇ ಬಾರಿ ಸಾಧನಾ ಪುರಸ್ಕಾರ ನೀಡಿ ಗೌರವಿಸಿದರು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಅವರುಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವಿಕರಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ನಿರ್ದೇಶಕರಾದ ಬಿ ರಮೇಶ್ ಬಿ ಸಾಲ್ಯಾನ್, ಸುರೇಶ್ ಕುಲಾಲ್ ಎನ್, ಕಿರಣ್ ಕುಮಾರ್ ಎ, ಅರುಣ್ ಕುಮಾರ್ ಕೆ ಹಾಗೂ ಸಿಬ್ಬಂದಿ ವಸಂತ ಎಂ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್ ಎನ್ ರಮೇಶ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ರಾಜರಾಮ್ ಭಟ್, ಶಶಿಕುಮಾರ್ ರೈ ಬಾಲ್ಯೊಟ್ಟು, ಭಾಸ್ಕರ ಕೋಟ್ಯಾನ್, ಕೆ ಜೈರಾಜ್ ಬಿ ರೈ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment