ಮಂಗಳೂರು, ಆಗಸ್ಟ್ 17, 2025 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ವೆನ್ಲಾಕ್ ಆಸ್ಪತ್ರೆಗೆ ಎಂಎಲ್ಸಿ ಲ್ಯಾಡ್ ನಿಂದ ಬಗ್ಗಿ ಅಂಬ್ಯುಲೆನ್ಸ್ ಕೊಡುಗೆ ಒದಗಿಸಿದ್ದಾರೆ. ಇದು ರೋಗಿಗಳಿಗೆ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ತೆರಳಲು ಅನುಕೂಲಕರವಾಗಲಿದೆ. ಹೊಸ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸೆಯಾದರೆ ಒಂದೆರಡು ದಿವಸಗಳ ಬಳಿಕ ಹಳೆ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಸಿಟಿ/ ಎಂ ಆರ್ ಐ/ ಎಕ್ಸ್ ರೇ/ ಸ್ಕ್ಯಾನಿಂಗ್ ಗಳಿಗೆ ರೋಗಿಗಳನ್ನು ಸಾಗಿಸಲು ಈ ವಾಹನ ಉಪಯುಕ್ತವಾಗಲಿದೆ ಎನ್ನಲಾಗಿದೆ.
ಕೊಡುಗೆ ನೀಡಿದ ಎಂಎಲ್ಸಿ ಐವನ್ ಡಿಸೋಜ ಅವರಿಗೆ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರ ಸಹಿತ ಆಸ್ಪತ್ರೆಯ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
















0 comments:
Post a Comment