ಬಂಟ್ವಾಳ, ಆಗಸ್ಟ್ 03, 2025 (ಕರಾವಳಿ ಟೈಮ್ಸ್) : ಓವರ್ ಟೇಕ್ ಭರದಲ್ಲಿದ್ದ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಅಟೋ ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ಶನಿವಾರ ಸಂಭವಿಸಿದೆ.
ಗಾಯಗೊಂಡವರನ್ನು ಅಟೋ ಚಾಲಕ, ಸ್ಥಳೀಯ ನಿವಾಸಿ ಶೇಖರ ಪೂಜಾರಿ (53), ಪ್ರಯಾಣಿಕರಾದ ಶೇಖರ್ ಹಾಗೂ ಚಂದ್ರಾವತಿ ಎಂದು ಹೆಸರಿಸಲಾಗಿದೆ. ಅಟೋ ಚಾಲಕ ಶೇಖರ್ ಅವರು ಪರಿಚಯದ ಶೇಖರ್ ಹಾಗೂ ಚಂದ್ರಾವತಿ ಅವರನ್ನು ಕುಳ್ಳಿರಿಸಿಕೊಂಡು ದಾಸಕೋಡಿ ಕಡೆಯಿಂದ ಕಲ್ಲಡ್ಕ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಹಿಂದಿನಿಂದ ಅಂದರೆ ಮಾಣಿ ಕಡೆಯಿಂದ ಬಿ ಸಿ ರೋಡು ಕಡೆಗೆ ಶರಣಪ್ಪ ಎಂಬವರು ಚಲಾಸಿಕೊಂಡು ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅಟೋ ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ತಿರುಗಿ ನಿಂತಿದ್ದು, ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಅಟೋ ಚಾಲಕ ಶೇಖರ್ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment